ಮುದಗಲ್ ಸಮೀಪದ ಹಡಗಲಿ ಗ್ರಾಮದಲ್ಲಿ ಸ್ಮಶಾನ ಜಾಗ ಸರ್ವೇಗೆ ಆಗಮಿಸಿದ್ದ ತಹಸೀಲ್ದಾರ್ ಮಲ್ಲಪ್ಪ ಯರಗೋಳ ಅವರು ಅಧಿಕಾರಿಗಳು-ಗ್ರಾಮಸ್ಥರೊಂದಿಗೆ ಚರ್ಚಿಸಿದರು. ಸರ್ವೆಮಾಡಿದರು. ಪಿಎಸ್‌ಐ ಮುದ್ದುರಂಗಸ್ವಾಮಿ, ಗ್ರಾಪಂ ಸದಸ್ಯ ದುರುಗಪ್ಪ ಕಟ್ಟಿಮನಿ ಇದ್ದರು. 
ಜಿಲ್ಲೆ

ಹಡಗಲಿ ಗ್ರಾಮದಲ್ಲಿ ಸ್ಮಶಾನ ಜಾಗ ಸರ್ವೇ

ಮುದಗಲ್: ಸಮೀಪದ ಹಡಗಲಿ ಗ್ರಾಮದ ಜನರ ಬಹುದಿನಗಳ ಬೇಡಿಕೆಯಾದ ಸ್ಮಶಾನ ಜಾಗಕ್ಕೆ ಸಂಬಂಧಿಸಿ ಮಸ್ಕಿ ತಹಸೀಲ್ದಾರ್ ಮಲ್ಲಪ್ಪ ಯರಗೋಳ ನೇತೃತ್ವದಲ್ಲಿ ಮಂಗಳವಾರ ಸರ್ವೇ ಕಾರ್ಯ ನಡೆಯಿತು.

ಗ್ರಾಮದಲ್ಲಿ ಯಾರಾದರೂ ನಿಧನರಾದರೆ ಅಂತ್ಯಕ್ರಿಯೆ ನಡೆಸಲು ಪರದಾಡುವಂತಾಗಿತ್ತು. ಹೀಗಾಗಿ ಸ್ಮಶಾನಕ್ಕೆ ಜಾಗ ಗುರುತಿಸಬೇಕೆಂದು ಗ್ರಾಮಸ್ಥರು ಸಾಕಷ್ಟು ಸಲ ತಾಲೂಕು ಕಚೇರಿಗೆ ಮನವಿ ಸಲ್ಲಿಸಿದ್ದರು. ಆದರೆೆ ಒಂದೆರಡು ಸಲ ಭೂಮಾಪನಾ ಇಲಾಖೆ ಅಧಿಕಾರಿಗಳು ಸರ್ವೇ ಮಾಡಲು ಗ್ರಾಮಕ್ಕೆ ಬಂದರೂ ಸಮಸ್ಯೆ ಬಗೆಹರಿದಿರಲಿಲ್ಲ.

ಈಗ ಸ್ವತಃ ತಹಸೀಲ್ದಾರ್ ಮಲ್ಲಪ್ಪ ಅವರೇ ಗ್ರಾಮಕ್ಕೆ ಭೇಟಿ ಸರ್ವೇ ನಡೆಸಿ ಹದ್ದುಬಸ್ತು ಗುರುತಿಸಿ ನಾಲ್ಕು ದಿಕ್ಕುಗಳಿಗೆ ಕಲ್ಲು ನೆಟ್ಟರು. ಪಿಎಸ್‌ಐ ಮುದ್ದುರಂಗಸ್ವಾಮಿ, ಗ್ರಾಪಂ ಸದಸ್ಯ ದುರುಗಪ್ಪ ಕಟ್ಟಿಮನಿ, ಗ್ರಾಮಸ್ಥರಾದ ಛತ್ರಪ್ಪ ವಾಲೀಕಾರ, ಹನುಮಂತ ವೆಂಕಟಾಪುರ, ಛತ್ರಪ್ಪ ಭಂಗಿ, ಬಸಪ್ಪ ಕಂಬಳಿ ಇತರರಿದ್ದರು.