ಹೂವಿನಹಡಗಲಿಯಲ್ಲಿ ಗೋದಾಮಿನ ವ್ಯವಸ್ಥಾಪಕ ಇರ್ಫಾನ್ ಪಾಷಾಗೆ ತಹಸೀಲ್ದಾರ್ ಕೆ.ವಿಜಯಕುಮಾರ್ ತರಾಟೆ ತೆಗೆದುಕೊಂಡರು. 
ಜಿಲ್ಲೆ

ಹಡಗಲಿಯಲ್ಲಿ ಅನಧಿಕೃತ ವ್ಯಕ್ತಿಗೆ ಪಡಿತರ ಅಕ್ಕಿ ಗೋದಾಮು ಜವಾಬ್ದಾರಿ, ವ್ಯವಸ್ಥಾಪಕ ಪಾಷಾ ಅಮಾನತಿಗೆ ತಹಸೀಲ್ದಾರ್ ಸೂಚನೆ

ಹೂವಿನಹಡಗಲಿ: ಸೇವೆಗೆ ಗೈರಾಗಿದ್ದಲ್ಲದೆ ಅನಧಿಕೃತ ವ್ಯಕ್ತಿಗೆ ಪಡಿತರ ಅಕ್ಕಿ ಗೋದಾಮಿನ ಜವಾಬ್ದಾರಿ ವಹಿಸಿದ್ದ ಗೋಡಾನ್‌ನ ವ್ಯವಸ್ಥಾಪಕ ಇರ್ಫಾನ್ ಪಾಷಾರನ್ನು ಅಮಾನತು ಮಾಡಲು ತಹಸೀಲ್ದಾರ್ ಕೆ.ವಿಜಯಕುಮಾರ್ ಸೂಚಿಸಿದ್ದಾರೆ.

ಈ ಕುರಿತು ಸಾರ್ವಜನಿಕರಿಂದ ದೂರು ಬಂದ ಹಿನ್ನೆಲೆಯಲ್ಲಿ ಬುಧವಾರ ತಹಸೀಲ್ದಾರ್ ವಿಜಯಕುಮಾರ್ ಗೋದಾಮಿಗೆ ಭೇಟಿ ನೀಡಿದಾಗ ಇರ್ಫಾನ್ ಖಾನ್ ಇರಲಿಲ್ಲ. ಬಳಿಕ ಅಧಿಕಾರಿಗಳ ಭೇಟಿ ವಿಷಯ ತಿಳಿದು ಸ್ಥಳಕ್ಕೆ ಬಂದ ಪಾಷಾಗೆ ತಹಸೀಲ್ದಾರ್ ತರಾಟೆಗೆ ತೆಗೆದುಕೊಂಡರು. ಸರ್ಕಾರದ ಅಧಿಕಾರಿಯಾಗಿ ಸ್ವಲ್ಪವೂ ಜವಾಬ್ದಾರಿ ಇಲ್ಲ. ಅನಧಿಕೃತ ವ್ಯಕ್ತಿಗೆ ಗೋದಾಮಿನ ಬೀಗ ಕೊಟ್ಟಿದ್ದು ತಪ್ಪು. ನಿಮ್ಮ ಕೆಲಸ ನೀವು ಮಾಡದೆ ಬೇರೆ ವ್ಯಕ್ತಿಯನ್ನು ನಿಯೋಜಿಸಿರುವುದು ಕಾನೂನು ಬಾಹಿರ ಎಂದು ಹರಿಹಾಯ್ದರು. ಕೂಡಲೇ ವ್ಯವಸ್ಥಾಪಕ ಇರ್ಪಾನ್ ಪಾಷಾ ಅಮಾನತಿಗೆ ಶಿಫಾರಸು ಮಾಡುವಂತೆ ಆಹಾರ ಇಲಾಖೆಯ ನಿರೀಕ್ಷಕ ಧನಂಜಯಗೆ ಸೂಚಿಸಿದರು. ಆಹಾರ ಇಲಾಖೆ ನಿರೀಕ್ಷಕ ಧನಂಜಯ, ಕಂದಾಯ ಅಧಿಕಾರಿ ಭಾರತಿ ಇತರರಿದ್ದರು.