ನಮ್ಮ ನಡೆ ಓದಿನ ಕಡೆ ಅಭಿಯಾನ ಅಂಗವಾಗಿ ಹುಗಲೂರು ಗ್ರಾಮದಲ್ಲಿ ಸರ್ಕಾರಿ ಪ್ರಾಥಮಿಕ ಶಾಲಾ ಮಕ್ಕಳು ಶುಕ್ರವಾರ ಜಾಗೃತಿ ಜಾಥಾ ನಡೆಸಿದರು. ಶಿಕ್ಷಕರಾದ ಎಚ್.ಜಿ.ಪಾಟೀಲ್, ವಿಜಯಕುಮಾರ್, ಎಸ್.ಎಸ್.ಪವಿತ್ರಾ ಇತರರಿದ್ದರು. 
ಜಿಲ್ಲೆ

ಪ್ರಾಥಮಿಕ ಹಂತದಲ್ಲೇ ಭಾಷಾ ಕೌಶಲ ಬೆಳೆಸಿಕೊಳ್ಳಿ

ನರೇಶ್ ಕುಮಾರ್

ಹೂವಿನಹಡಗಲಿ: ವಿದ್ಯಾರ್ಥಿ ಜೀವನದಿಂದಲೇ ಮಾತೃಭಾಷೆಯ ಬಗ್ಗೆ ಜ್ಞಾನ ಹೊಂದಲು ಕನ್ನಡ ದಿನ ಪತ್ರಿಕೆಗಳನ್ನು ನಿತ್ಯ ಓದುವುದನ್ನು ರೂಢಿಸಿಕೊಳ್ಳಬೇಕು ಎಂದು ಶಿಕ್ಷಕ ಎಚ್.ಜಿ.ಪಾಟೀಲ್ ಹೇಳಿದರು.

ಹುಗಲೂರು ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜೆಎಸ್‌ಡಬ್ಲುೃ ಸಹಯೋಗದಲ್ಲಿ ಆಯೋಜಿಸಿದ್ದ ನಮ್ಮ ನಡೆ ಓದಿನ ಕಡೆ ಅಭಿಯಾನದಲ್ಲಿ ಮಾತನಾಡಿದರು.

ವಿದ್ಯಾರ್ಥಿಗಳು ಪ್ರಾಥಮಿಕ ಹಂತದಲ್ಲಿ ಭಾಷೆ ಮತ್ತು ಕೌಶಲಗಳನ್ನು ಸರಿಯಾಗಿ ಕಲಿಯಬೇಕು. ಪುಸ್ತಕ, ಪತ್ರಿಕೆ ಓದುವ ಮೂಲಕ ಭಾಷಾ ಪ್ರಭುತ್ವಗಳಿಸಿಕೊಳ್ಳಬೇಕು. ಪ್ರಸ್ತುತ ದಿನಗಳಲ್ಲಿ ಪಾಲಕರು ಮಕ್ಕಳಿಗೆ ಮೊಬೈಲ್ ಹಾಗೂ ಟಿವಿಗಳಿಂದ ದೂರವಿಡಬೇಕು. ಈ ಮೂಲಕ ಮಕ್ಕಳಿಗೆ ಉತ್ತಮ ಭವಿಷ್ಯ ರೂಪಿಸಬೇಕು ಎಂದು ತಿಳಿಸಿದರು.

ಮುಖ್ಯಶಿಕ್ಷಕ ಕೆ.ಮಲ್ಲಪ್ಪ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಸಂಯೋಜಕ ಕೆ.ಎಸ್.ರಂಗಸ್ವಾಮಿ, ಎಸ್ಡಿಎಂಸಿ ಅಧ್ಯಕ್ಷ ಕೆ.ಹನುಮಂತಪ್ಪ, ಶಿಕ್ಷಕರಾದ ವಿಜಯಕುಮಾರ್, ಎಸ್.ಎಸ್.ಪವಿತ್ರಾ ಇತರರಿದ್ದರು.