ಹೂವಿನಹಡಗಲಿಯಲ್ಲಿ ಮಂಗಳವಾರ ಸುರಿದ ಮಳೆಯಲ್ಲಿಯೇ ಮಹಿಳೆಯರು ಕೊಡೆ ಹಿಡಿದು ಹೊರಟಿರುವುದು. 
ಜಿಲ್ಲೆ

ಹಡಗಲಿಯಲ್ಲಿ ಮಳೆಯಿಂದ ತಂಪು ವಾತಾವರಣ

ಹೂವಿನಹಡಗಲಿ: ತಾಲೂಕಾದ್ಯಂತ ಕಳೆದ ಮೂರ‌್ನಾಲ್ಕು ದಿನಗಳಿಂದ ಜಿಟಿಜಿಟಿ ಮಳೆ ಸುರಿಯುತ್ತಿದ್ದು, ತಂಪಿನ ವಾತಾವರಣ ಸೃಷ್ಟಿಯಾಗಿದೆ.

ನಿರಂತರ ಮಳೆಯಿಂದ ರಸ್ತೆಗಳಲ್ಲಿನ ತಗ್ಗುಗಳಲ್ಲಿ ನೀರು ತುಂಬಿ ದೊಡ್ಡ ಗುಂಡಿಗಳಾಗಿ ನಿರ್ಮಾಣವಾಗಿವೆ. ಕೆಲ ಭಾಗಗಳಲ್ಲಿ ಲಾರಿಗಳು ಸಿಲುಕಿಕೊಂಡ ದೃಶ್ಯಗಳು ಕಂಡು ಬಂದವು.

ಪಟ್ಟಣದ ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆಗಳಲ್ಲಿ ಕೆಮ್ಮು ಮತ್ತು ಶೀತದ ತೊಂದರೆಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ. ಮಂಗಳವಾರ ಶಾಲಾ, ಕಾಲೇಜಿನ ವಿದ್ಯಾರ್ಥಿಗಳು ಮಳೆಯಿಂದ ತಪ್ಪಿಸಿಕೊಳ್ಳಲು ರಸ್ತೆಯ ಬದಿ ಅಂಗಡಿಗಳ ಮುಂಭಾಗದಲ್ಲಿ ಆಶ್ರಯ ಪಡೆದರು.

ಮಧ್ಯಾಹ್ನ ಹಾಗೂ ಸಂಜೆ ಸುಮಾರು ಒಂದುಗಂಟೆಗೂ ಹೆಚ್ಚುಕಾಲ ಮಳೆ ಸುರಿಯಿತು.