ಹೂವಿನಹಡಗಲಿಯ ಜಿಬಿಆರ್ ಪದವಿ ಮಹಾವಿದ್ಯಾಲಯ ಏರ್ಪಡಿಸಿರುವ ಎನ್ನೆಸ್ಸೆಸ್ ಶಿಬಿರದಲ್ಲಿ ಶುಕ್ರವಾರ ಏರ್ಪಡಿಸಿದ್ದ ಕಾನೂನು ಅರಿವು-ನೆರವು ಕಾರ್ಯಕ್ರಮದಲ್ಲಿ ಹಿರಿಯ ನ್ಯಾಯಾಧೀಶ ಡಿ.ಕೆ.ಮಧುಸೂದನ್ ಮಾತನಾಡಿದರು. ವಕೀಲರ ಸಂಘದ ಅಧ್ಯಕ್ಷ ಜಿ.ವಸಂತ್‌ಕುಮಾರ್, ಪ್ರಾಚಾರ್ಯ ಎಸ್.ಎಸ್.ಪಾಟೀಲ, ಶಿಬಿರಾಧಿಕಾರಿ ಆಶಾ ಬಿ, ಮಾಬುಸಾಬ್ ಇದ್ದರು. 
ಜಿಲ್ಲೆ

ಅನ್ಯಾಯದ ವಿರುದ್ಧ ಹೋರಾಡಿ

ನರೇಶ್ ಕುಮಾರ್

ಹೂವಿನಹಡಗಲಿ: ಶಿಕ್ಷಣ ಪಡೆದ ಯುವಕ, ಯುವತಿಯರು ಅನ್ಯಾಯವನ್ನು ಕಂಡು ಸುಮ್ಮನಿರದೆ ಪ್ರಶ್ನಿಸಬೇಕು ಎಂದು ಜೆಎಂಎಫ್ ನ್ಯಾಯಾಲಯದ ಹಿರಿಯ ನ್ಯಾಯಾಧೀಶ ಡಿ.ಕೆ.ಮಧುಸೂದನ್ ಹೇಳಿದರು.

ಪಟ್ಟಣದ ಜಿಬಿಆರ್ ಪದವಿ ಮಹಾವಿದ್ಯಾಲಯ ಹಮ್ಮಿಕೊಂಡಿರುವ ಎನ್ನೆಸ್ಸೆಸ್ ಶಿಬಿರದಲ್ಲಿ ಶುಕ್ರವಾರ ಕಾನೂನು ಅರಿವು-ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಅಪ್ರಾಪ್ತರು, ಮಹಿಳೆಯರ ರಕ್ಷಣೆಗೆ ಸಾಕಷ್ಟು ಕಾನೂನುಗಳಿದ್ದು, ತಿಳಿದುಕೊಳ್ಳಬೇಕು. ಇತ್ತೀಚಿನ ದಿನಗಳಲ್ಲಿ ಸಂಬಂಧಿಕರು ಹಾಗೂ ಹತ್ತಿರದವರಿಂದಲೇ ಅಪ್ರಾಪ್ತರ ಮೇಲೆ ಲೈಂಗಿಕ ದೌರ್ಜನ್ಯಗಳು ನಡೆಯುತ್ತಿವೆ. ಹೆಣ್ಣು ಮಕ್ಕಳು ಸಂಬಂಧಿಕರೆಂದು ಸುಮ್ಮನಿರದೆ ಅನ್ಯಾಯದ ವಿರುದ್ಧ ಹೋರಾಡಬೇಕು.

ಯುವಕರು ಚಾಲನಾ ಪರವಾನಗಿ ಇಲ್ಲದೆ ವಾಹನಗಳನ್ನು ಚಲಾಯಿಸುತ್ತಿರುವುದನ್ನು ಸಾಕಷ್ಟು ಬಾರಿ ನೋಡಿರುವೆ. ಮೊದಲು ಲೈಸೆನ್ಸ್ ಪಡೆಯಬೇಕು. ಬಾಲ್ಯವಿವಾಹ ಕಂಡುಬಂದರೆ ಕೂಡಲೇ 112 ಸಹಾಯವಾಣಿಗೆ ಕರೆ ಮಾಡಿ ದೂರು ನೀಡಬೇಕು ಎಂದರು.

ವಕೀಲರ ಸಂಘದ ಅಧ್ಯಕ್ಷ ಜಿ.ವಸಂತ್ ಕುಮಾರ್, ಪ್ರಾಚಾರ್ಯ ಎಸ್.ಎಸ್.ಪಾಟೀಲ, ಎನ್ನೆಸ್ಸೆಸ್ ಶಿಬಿರಾಧಿಕಾರಿಗಳಾದ ಆಶಾ ಬಿ, ಮಾಬುಸಾಬ್, ಶರಣಪ್ಪ ಜಕ್ಕಲಿ, ದೈಹಿಕ ಶಿಕ್ಷಣ ನಿರ್ದೇಶ ಬಡೇಸಾಬ್ ನಾಯಕ ಇತರರಿದ್ದರು.