ಹೂವಿನಹಡಗಲಿಯ ಸೊಪ್ಪಿನಕಾಳಮ್ಮ ಬಡಾವಣೆಯಲ್ಲಿ ಗಣೇಶೋತ್ಸವದ ಅಂಗವಾಗಿ ಯುವಕರು ರಕ್ತದಾನ ಮಾಡಿದರು. 
ಜಿಲ್ಲೆ

ಹಡಗಲಿಯಲ್ಲಿ ಯುವಕರಿಂದ ರಕ್ತದಾನ

ಹೂವಿನಹಡಗಲಿ: ಪಟ್ಟಣದ ಸೊಪ್ಪಿನಕಾಳಮ್ಮ ಬಡಾವಣೆಯಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಿರುವ ಶ್ರೀ ಮಲ್ಲಿಕಾರ್ಜುನ ಯುವಕರ ತಂಡ ರಕ್ತದಾನ ಮಾಡುವ ಮೂಲಕ ಗಣೇಶೋತ್ಸವ ಆಚರಿಸಿದ್ದಾರೆ.

ಗಣೇಶೋತ್ಸವದ ಅಂಗವಾಗಿ ಭಾನುವಾರ ಆಯೋಜಿಸಿದ್ದ ಆರೋಗ್ಯ ತಪಾಸಣೆ ಮತ್ತು ರಕ್ತದಾನ ಶಿಬಿರದಲ್ಲಿ ಯುವಕರು ರಕ್ತದಾನ ಮಾಡಿದರು.

ಮಂಡಳಿ ಸದಸ್ಯ ಸಿಂಗಟಾಲೂರು ಶೆಟ್ರು ಅರುಣ್ ಮಾತನಾಡಿ, ಗಣೇಶೋತ್ಸವ ಕೇವಲ ಮೋಜು ಮಸ್ತಿಗೆ ಕಾರಣವಾಗದೆ ಸಾಮಾಜಿಕ ಕಾಳಜಿ ತೋರಬೇಕು. ಬಡಾವಣೆಯಲ್ಲಿ ಶಾಂತಿ ಮತ್ತು ಸೌಹಾರ್ದದಿಂದ ಎಲ್ಲರೂ ಒಟ್ಟಾಗಿ ಬಾಳಬೇಕು ಎಂದರು.

20ಕ್ಕೂ ಹೆಚ್ಚು ಯುವಕರು ರಕ್ತದಾನ ಹಾಗೂ ಎಂಟು ಜನರು ನೇತ್ರದಾನ ಮಾಡಿದರು. ವೈದ್ಯ ಬಿ.ನಾಗನಗೌಡ, ಪ್ರಮುಖರಾದ ಮಂಜುನಾಥ, ಅಕ್ಷಯ್, ನಿಖಿಲ್, ಅನಿಲ್, ಮೋಹನ್ ಪರಶೆಟ್ಟಿ, ಶಿವಪ್ರಸಾದ್ ಮೇಟಿ ಇತರರಿದ್ದರು.