ಹುಬ್ಬಳ್ಳಿ: ಇಲ್ಲಿಯ ದೇಶಪಾಂಡೆನಗರದಲ್ಲಿರುವ ತಮ್ಮ ಮನೆಯನ್ನು ಪಕ್ಷದ ಮೇಲಿನ ಅಭಿಮಾನದಿಂದ ಬಾಡಿಗೆ ಇಲ್ಲದೇ ಕಾರ್ಯಾಲಯಕ್ಕಾಗಿ ನೀಡಿದ್ದ ಜನಸಂಘದ ಹಿರಿಯರು, ಎಸ್ಎಸ್ಕೆ ಸಮಾಜದ ಗಣ್ಯರಾದ ದಿ. ಆರ್.ಪಿ. ಹಬೀಬ ಅವರ ಕುಟುಂಬದವರನ್ನು ಬಿಜೆಪಿ ಮುಖಂಡ ಹಾಗೂ ವಿಎಕೆ ಫೌಂಡೇಷನ್ ಸಂಸ್ಥಾಪಕ ವೆಂಕಟೇಶ ಕಾಟವೆ ನೇತೃತ್ವದಲ್ಲಿ ಸನ್ಮಾನಿಸಲಾಯಿತು.
ಕಳೆದ 17 ವರ್ಷಗಳಿಂದ ಭಾರತೀಯ ಜನತಾ ಪಕ್ಷದ ಕಾರ್ಯಾಲಯಕ್ಕಾಗಿ ಮನೆಯನ್ನು ಉಚಿತವಾಗಿ ನೀಡಲಾಗಿತ್ತು. ಇದೀಗ ಪಕ್ಷದ ಕಚೇರಿಯನ್ನು ನೂತನ ಕಟ್ಟಡಕ್ಕೆ ಸ್ಥಳಾಂತರಿಸಲಾಗಿದೆ.
ದಿ. ಆರ್.ಪಿ. ಹಬೀಬ ಅವರ ಧರ್ಮಪತ್ನಿ ಶಾರದಾಬಾಯಿ ಆರ್. ಹಬೀಬ, ಪುತ್ರರಾದ ನಾರಾಯಣಸಾ ಹಬೀಬ, ಶ್ಯಾಮ ಹಬೀಬ, ಮಾಧು ಹಬೀಬ, ವಿಮಲ ಹಬೀಬ ಇವರನ್ನು ಮಾಜಿ ಶಾಸಕ ಅಶೋಕ ಕಾಟವೆ, ರಂಗಾ ಬದ್ದಿ, ಬಾಳು ಮಗಜಿಕೊಂಡಿ, ವಿಠ್ಠಲ ಲದವಾ ಇತರರು ಸನ್ಮಾನಿಸಿದರು. ಪ್ರಭು ಶ್ರೀರಾಮನ ಪ್ರತಿಮೆ ನೀಡಿ ಗೌರವಿಸಲಾಯಿತು.
ಭಾಸ್ಕರ ಜಿತೂರಿ, ನಾಗೇಶ್ ಕಲ್ಬುರ್ಗಿ, ದೀಪಕ ಮಗಜಿಕೊಂಡಿ, ಸೀಮಾ ಲದವಾ, ಪ್ರತಿಭಾ ಪವಾರ, ಸಂಗೀತಾ ಬದ್ದಿ, ಪ್ರಕಾಶ ಬುರಬುರೆ, ರಾಜು ಜರತಾರರ್, ಸಚಿನ್ ಕಾಟವೆ, ನಾಗರಾಜ ಪಟ್ಟಣ, ಅಮಿತ್ ಇರಕಲ್, ಕುಟುಂಬಸ್ಥರು ಉಪಸ್ಥಿತರಿದ್ದರು.