ಜಿಲ್ಲೆ

ಗಾಣಗಾಪುರದ ದತ್ತನ ಮೊರೆ ಹೊದ ಹಳ್ಳಿ ಹಕ್ಕಿ ವಿಶ್ವನಾಥ್

ರಮೇಶ್​ ಕುಮಾರ್​​ ಬಿ ಎಡಮೋಳೆ

ಕಲಬುರಗಿ: ಜಿಲ್ಲೆಯ ಅಫಜಲಪುರ ತಾಲ್ಲೂಕಿನ ಗಾಣಗಾಪುರದಲ್ಲಿರುವ ದತ್ತನ ದೇವಸ್ಥಾನಕ್ಕೆ ಎಚ್​.ವಿಶ್ವನಾಥ್ ಅವರು ಸೋಮವಾರ ಭೇಟಿ ನೀಡಿದ್ದು, ವಿಶೇಷ ಪೂಜೆ ಪ್ರಾರ್ಥನೆ ಸಲ್ಲಿಸಿದ್ದಾರೆ.

ದತ್ತನ ನಿರ್ಗುಣ ಪಾದುಕೆಗಳಿಗೆ ವಿಶೇಷ ಪೂಜೆ ಸಲ್ಲಿಸಿದ ವಿಶ್ವನಾಥ್ ಅವರು, ಚುನಾವಣೆಯಲ್ಲಿ ಸೊತ ಬಳಿಕ ಮೊದಲ ಬಾರಿಗೆ ದತ್ತನ‌ ದೇವಸ್ಥಾನಕ್ಕೆ ಆಗಮಿಸಿದ್ದರು.
ಸಚಿವ ಸ್ಥಾನದ ನೀರಿಕ್ಷೆಯಲ್ಲಿರುವ ವಿಶ್ವನಾಥ್ ದೇವಸ್ಥಾನದ ಭೇಟಿ ತುಂಬ ಕೂತುಹಲ ಮೂಡಿಸಿದೆ ರಾಯಚೂರಿನಿಂದ ಕಲಬುರಗಿಗೆ ಗಾಣಗಾಪುರಕ್ಕೆ ಭೇಟಿ ನೀಡುವ ಸಲುವಾಗಿ

ಆಗಮಿಸಿದ್ದರು. ದತ್ತನ ದರ್ಶನ ಪಡೆದ ಅವರು ಕಲಬುರಗಿ ವಿಮಾನ ನಿಲ್ದಾಣದಿಂದ ಬೆಂಗಳೂರಿಗೆ ತೆರಳಿದರು.