ಜಿಲ್ಲೆ

ನ್ಯಾಯಾಧೀಶರ ಆದೇಶವನ್ನು ಪ್ರಶ್ನಿಸಿವುದು ನ್ಯಾಯಾಂಗ ನಿಂದನೆ ಆಗುತ್ತದೆ: ಎಚ್​. ವಿಶ್ವನಾಥ್​

ರಮೇಶ್​ ಕುಮಾರ್​​ ಬಿ ಎಡಮೋಳೆ

ಮೈಸೂರು: ನ್ಯಾಯಾಧೀಶರನ್ನು ನಾವೆಲ್ಲ ಸರ್ವಜ್ಞರು ಅಂತಲೇ ಭಾವಿಸಿದ್ದೇವೆ ಎನ್ನುವ ಮೂಲಕ ಬಿಜೆಪಿ ನಾಯಕ ಅಡಗೂರು ಎಚ್​. ವಿಶ್ವನಾಥ್ ಅವರು ಸಿ.ಟಿ. ರವಿ ಹೇಳಿಕೆಯನ್ನು ಟೀಕಿಸಿದರು.

ಲಸಿಕೆ ವಿಚಾರವಾಗಿ ನಿನ್ನೆ ನ್ಯಾಯಾಧೀಶರೇನೋ ಸರ್ವಜ್ಞರಲ್ಲ ಎಂದು ಸಿ.ಟಿ.ರವಿ ಹೇಳಿಕೆ ನೀಡಿದ್ದರು. ಈ ಬಗ್ಗೆ ಮಾತನಾಡಿದ ಎಚ್​. ವಿಶ್ವನಾಥ್​, ನ್ಯಾಯಾಧೀಶರ ಆದೇಶವನ್ನು ಪ್ರಶ್ನಿಸಿವುದು ನ್ಯಾಯಂಗ ನಿಂದನೆ ಆಗುತ್ತದೆ ಎಂದು ಅಭಿಪ್ರಾಯಪಟ್ಟರು.

ಜಡ್ಜ್‌ಗಳು ಸರ್ವಜ್ಞರು ಅನ್ನುವ ಭಾವನೆ ಇದೆ. ಕೇಂದ್ರ, ರಾಜ್ಯ ಸರ್ಕಾರಗಳಿಗೆ ನ್ಯಾಯಾಲಯಗಳೇ ಸೂಚನೆ ಕೊಡುತ್ತಿವೆ. ಚಾಮರಾಜನಗರ ಘಟನೆಯಲ್ಲಿ ಹೈಕೋರ್ಟ್ ಮಧ್ಯ ಪ್ರವೇಶ ಮಾಡಿದ್ದಕ್ಕೆ ಮೈಸೂರಿಗೆ ಗೌರವ ಬಂತು ಎಂದರು.

ಒಂದು ವೇಳೆ ಅಧಿಕಾರಿಗಳು ಬಂದಿದ್ದರೆ ಸತ್ತವರು ಮೂರೇ ಜನ, ಮೈಸೂರು ಮತ್ತು ಚಾಮರಾಜನಗರ ಇಬ್ಬರೂ ಕಾರಣ ಅಂತ ವರದಿ ಬರ್ತಿತ್ತು. ಹೀಗಾಗಿ ನ್ಯಾಯಾಂಗಕ್ಕೆ ನನ್ನ ಧನ್ಯವಾದ ಇದೆ ಎಂದು ತಿಳಿಸಿದರು.

ಸದಾನಂದಗೌಡರು ಕೇಂದ್ರ ಸಚಿವರು. ಸಿ.ಟಿ.ರವಿ ಸಹ ಸಚಿವರಾಗಿದ್ದವರು. ಇವರು ಸರ್ಕಾರದ ಭಾಗವಾಗಿದ್ದವರು. ಸದಾನಂದಗೌಡರು ನೇಣು ಹಾಕಿಕೊಳ್ಳಲಾ ಅಂದ್ರೆ ಸರ್ಕಾರವೇ ನೇಣು ಹಾಕಿಕೊಳ್ಳುತ್ತಾ? ಈ ದೇಶದಲ್ಲಿ ಕಾನೂನು ಇದೆ. ವ್ಯವಸ್ಥೆಯನ್ನು ಅಳಿಯುವುದು ಸರಿಯಲ್ಲ ಎಂದು ಸ್ವಪಕ್ಷದವರ ವಿರುದ್ಧವೇ ವಿಶ್ವನಾಥ್​ ಟೀಕಿಸಿದರು. (ದಿಗ್ವಿಜಯ ನ್ಯೂಸ್​)