ಜಿಲ್ಲೆ

ಹೊಸಗಾವಿ ಡೇರಿಗೆ ಎಚ್.ಮಂಚೇಗೌಡ ಅಧ್ಯಕ್ಷ

ಮದ್ದೂರು: ತಾಲೂಕಿನ ಹೊಸಗಾವಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾಗಿ ಎಚ್.ಮಂಚೇಗೌಡ, ಉಪಾಧ್ಯಕ್ಷರಾಗಿ ಶ್ರೀಕಂಠ ಅವಿರೋಧವಾಗಿ ಆಯ್ಕೆಯಾದರು.

ಸಂಘದ ಸಭಾಂಗಣದಲ್ಲಿ ಇತ್ತೀಚೆಗೆ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಎಚ್.ಮಂಚೇಗೌಡ, ಉಪಾಧ್ಯಕ್ಷ ಸ್ಥಾನಕ್ಕೆ ಶ್ರೀಕಂಠ ಹೊರತುಪಡಿಸಿ ಬೇರ‌್ಯಾರು ನಾಮಪತ್ರ ಸಲ್ಲಿಸದ ಹಿನ್ನೆಲೆ ಅವಿರೋಧ ಆಯ್ಕೆಯನ್ನು ಚುನಾವಣಾಧಿಕಾರಿ ಸುಧಾಕರ್ ಘೋಷಣೆ ಮಾಡಿದರು.

ನೂತನ ಅಧ್ಯಕ್ಷ ಎಚ್.ಮಂಚೇಗೌಡ ಮಾತನಾಡಿ, ಸಂಘದ ಎಲ್ಲ ನಿರ್ದೇಶಕರ ವಿಶ್ವಾಸ ಪಡೆದು ಸಂಘದ ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತೇನೆ ಹಾಗೂ ಸರ್ಕಾರ ಹಾಗೂ ಜಿಲ್ಲಾ ಹಾಲು ಒಕ್ಕೂಟದಿಂದ ಸಿಗುವ ಸವಲತ್ತನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸುತ್ತೇನೆ ಎಂದರು.

ಸಂಘದ ನಿರ್ದೇಶಕರಾದ ಸಣ್ಣವರದಯ್ಯ, ಚಂದ್ರು, ಕೆಂಚಯ್ಯ, ಲಕ್ಷ್ಮಮ್ಮ, ಮುಖಂಡರಾದ ಎಚ್.ಎಲ್.ರಮೇಶ್, ಚಂದ್ರು, ರಾಜಣ್ಣ ಇದ್ದರು.