ಜಿಲ್ಲೆ

ಎಚ್.ಎಂ.ಪ್ರಸನ್ನ ಅವಿರೋಧ ಆಯ್ಕೆ

Mysuru - Desk - Yashavanth Kumar N

ಮದ್ದೂರು: ತಾಲೂಕಿನ ಹೊಸಕೆರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಜೆಡಿಎಸ್ ಬೆಂಬಲಿತ ಹೊಸಕೆರೆ ಎಚ್.ಎಂ.ಪ್ರಸನ್ನ ಅವಿರೋಧವಾಗಿ ಆಯ್ಕೆಯಾದರು.

ಗುರುವಾರ ಸಂಘದ ಸಭಾಂಗಣದಲ್ಲಿ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ಪ್ರಸನ್ನ ಹೊರತುಪಡಿಸಿ ಬೇರಾರೂ ನಾಮಪತ್ರ ಸಲ್ಲಿಸದ ಕಾರಣ ಚುನಾವಣಾಧಿಕಾರಿ ಅವಿರೋಧ ಆಯ್ಕೆ ಘೋಷಿಸಿದರು.
ಸಂಘದ ಉಪಾಧ್ಯಕ್ಷೆ ಎಚ್.ಎಲ್.ಪ್ರಭಾವತಿ, ನಿರ್ದೇಶಕರಾದ ಎಚ್.ಎಲ್.ದಯಾನಂದ, ವಿಜೇಂದ್ರ, ರಾಮಕೃಷ್ಣ, ಪುಟ್ಟಸ್ವಾಮಿ, ಕೆಂಚೇಗೌಡ, ಎಚ್.ಆರ್.ಪುಟ್ಟಸ್ವಾಮಿ, ಚನ್ನಮ್ಮ ಜಯಮ್ಮ ಹಾಗೂ ಮುಖಂಡರಾದ ಶಿವಕುಮಾರ್, ಕಾಳಯ್ಯ, ಲೋಕೇಶ್, ಅಂಗಡಿ ಶಿವರಾಮ್, ಕೃಷ್ಣ, ಶಂಕರಪುರದ ಕೃಷ್ಣಪ್ಪ, ಆನೆದೊಡ್ಡಿ ಶ್ರೀನಿವಾಸ್, ಮಿಲ್ಟ್ರಿ ಮಲ್ಲರಾಜು ಇದ್ದರು.