ಜಿಲ್ಲೆ

`ಸದನದಲ್ಲಿ ಎಚ್.ಕೆ. ಪಾಟೀಲ' ಸಂಪುಟಗಳ ಲೋಕಾರ್ಪಣೆ

ಮಂಜುನಾಥ ಅಂಗಡಿ

ಧಾರವಾಡ: ಕರ್ನಾಟಕ ಸಂಶೋದಕರ ಒಕ್ಕೂಟದಿಂದ ಪ್ರಕಟಿಸಿದ `ಸದನದಲ್ಲಿ ಎಚ್.ಕೆ. ಪಾಟೀಲ' ೫ ಸಂಪುಟಗಳ ಲೋಕಾರ್ಪಣೆಯನ್ನು ನಗರದ ಕರ್ನಾಟಕ ವಿಶ್ವವಿದ್ಯಾಲಯದ ಸುವರ್ಣ ಮಹೋತ್ಸವ ಭವನದಲ್ಲಿ ಜ. ೧೩ರಂದು ಬೆಳಗ್ಗೆ ೧೧ ಗಂಟೆಗೆ ಆಯೋಜಿಸಲಾಗಿದೆ ಎಂದು ಒಕ್ಕೂಟದ ಸಂಚಾಲನಾ ಸಮಿತಿ ಅಧ್ಯಕ್ಷ ಡಾ. ತೇಜಸ್ವಿ ಕಟ್ಟಿಮನಿ ಹೇಳಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಭಾಪತಿ ಬಸವರಾಜ ಹೊರಟ್ಟಿ ಅಧ್ಯಕ್ಷತೆ ವಹಿಸುವರು. ವಿಧಾನಸಭಾಧ್ಯಕ್ಷ ಯು.ಟಿ. ಖಾದರ ಉದ್ಘಾಟಿಸುವರು. ವಿಶ್ರಾಂತ ಸಭಾಪತಿಗಳಾದ ಡಾ. ಬಿ.ಎಲ್. ಶಂಕರ, ವಿ.ಆರ್. ಸುದರ್ಶನ, ವೀರಣ್ಣ ಮತ್ತಿಕಟ್ಟಿ ಹಾಗೂ ಉಸ್ತುವಾರಿ ಸಚಿವ ಸಂತೋಷ ಲಾಡ್ ಅತಿಥಿಗಳಾಗಿ ಪಾಲ್ಗೊಳ್ಳುವರು. ಸಂಸದೀಯ ವ್ಯವಹಾರ ಹಾಗೂ ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ ಗೌರವ ಉಪಸ್ಥಿತರಿರುವರು. ಕವಿವಿ ಕುಲಪತಿ ಪ್ರೊ. ಕೆ.ಬಿ. ಗುಡಸಿ, ಕೃಷಿ ವಿಶ್ವವಿದ್ಯಾಲಯ ಕುಲಪತಿ ಡಾ. ಪಿ.ಎಲ್. ಪಾಟೀಲ ಉಪಸ್ಥಿತರಿರುವರು ಎಂದರು.
ಪ್ರಸ್ತುತ ರಾಜಕಾರಣದ ಕಾಲಘಟ್ಟದಲ್ಲಿ ಸಚಿವ ಎಚ್.ಕೆ. ಪಾಟೀಲರಂಥ ಮುತ್ಸದ್ದಿ ಯುವ ರಾಜಕಾರಣಿಗಳಿಗೆ ಮಾರ್ಗದರ್ಶಕರು. ಅವರು ವಿಧಾನ ಪರಿಷತ್ ಸದಸ್ಯರಾಗಿ, ಪ್ರತಿಪಕ್ಷ ನಾಯಕರಾಗಿ, ಶಾಸಕ- ಸಚಿವರಾಗಿ ಎರಡೂ ಸದನಗಳಲ್ಲಿ ಚರ್ಚೆ, ಮಂಡನೆ, ಭಾಷಣ ಮತ್ತು ವಿಚಾರ- ವಿಮಶೆಗಳನ್ನು ಸಂಪುಟದಲ್ಲಿ ಪ್ರಕಟಿಸಲಾಗಿದೆ. ಇವು ರಾಜಕಾರಣಿಗಳಿಗೆ ಮಾರ್ಗದರ್ಶಿಯಾಗಲಿ ಎಂಬ ಉದ್ದೇಶದಿಂದ ಕರ್ನಾಟಕ ಸಂಶೋಧಕರ ಒಕ್ಕೂಟ ಸಂಪುಟಗಳನ್ನು ಪ್ರಕಾಶನ ಮಾಡಿ ಲೋಕಾರ್ಪಣೆಗೆ ಅಣಿಗೊಳಿಸಲಾಗಿದೆ ಎಂದರು.
ಸAಪುಟಗಳ ಸಂಪಾದಕ ಡಾ. ರೇವಯ್ಯ ಒಡೆಯರ್, ನೂರಅಹ್ಮದ್ ಮಕಾನದಾರ, ಇತರರಿದ್ದರು.