ಚಿತ್ರದುರ್ಗ: ಹೆಸರಾಂತ ಪೈಲ್ವಾನ್ ಹೊನ್ನಪ್ಪ ಅವರ ಪುತ್ರಿ, ಬುರುಜನಹಟ್ಟಿ ನಿವಾಸಿ ಎಚ್.ಗೌರಮ್ಮ (75) ಭಾನುವಾರ ಮುಂಜಾನೆ ನಿಧನರಾದರು.
ರಂಗಭೂಮಿ ಹಿರಿಯ ರಂಗಕಲಾವಿದ ದಿವಂಗತ ರಾಮಪ್ಪ ಅವರ ಪತ್ನಿ ಗೌರಮ್ಮ ಅವರಿಗೆ ಪುತ್ರಿ, ಮೂವರು ಪುತ್ರರು ಇದ್ದಾರೆ. ಸಂಜೆ ಅಂತ್ಯಕ್ರಿಯೆ ನೆರವೇರಿತು ಎಂದು ಮೃತರ ಪುತ್ರ, ಕುರುಬ ಸಮಾಜದ ಮುಖಂಡ ನಟರಾಜ್ ಆನೆ ತಿಳಿಸಿದ್ದಾರೆ.
ಅಂತಿಮ ದರ್ಶನ: ಮೃತರ ನಿವಾಸಕ್ಕೆ ವಿವಿಧ ಪಕ್ಷದ ಮುಖಂಡರು, ಗಣ್ಯರು ಭೇಟಿ ನೀಡಿ ಅಂತಿಮ ದರ್ಶನ ಪಡೆದು, ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು.