ಜಿಲ್ಲೆ

ಜಿಮ್​​ನಲ್ಲಿ ಯುವತಿ ಸಾವು ಪ್ರಕರಣ; ಪೋಸ್ಟ್ ಮಾರ್ಟಮ್ ವರದಿಯಲ್ಲಿ ಸಾವಿನ ರಹಸ್ಯ!

theerthaswamy

ಬೆಂಗಳೂರು: ನಗರದ ಬೈಯಪ್ಪನಹಳ್ಳಿ ಜಿಮ್‌ನಲ್ಲಿ ಯುವತಿ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ, ಸಾವಿನ ಕಾರಣವು ಪೋಸ್ಟ್ ಮಾರ್ಟಮ್ ವರದಿಯಲ್ಲಿ ಬಹಿರಂಗವಾಗಿದೆ.

ಸಿವಿ ರಾಮನ್ ಆಸ್ಪತ್ರೆ ವೈದ್ಯರಿಂದ ಪೋಸ್ಟ್ ಮಾರ್ಟಂ ವರದಿ ನೀಡಲಾಗಿದೆ. ಅದರಂತೆ, ಕೋಮಾದ ಪರಿಣಾಮವಾಗಿ ಸಾವು ಸಂಭವಿಸಿದೆ. ಮೆದುಳಿನಲ್ಲಿ ಒತ್ತಡ ಉಂಟಾಗಿ ರಕ್ತನಾಳ ಛಿದ್ರಗೊಂಡ ಪರಿಣಾಮವಾಗಿ ಸೆರೆಬ್ರಲ್ ಹೆಮರೇಜ್ ಆಗಿದೆ. ಅದರಿಂದ ಯುವತಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಪೂರ್ವ ವಿಭಾಗ ಡಿಸಿಪಿ ಡಾ.ಭೀಮಾಶಂಕರ್ ಗುಳೇದ ಮಾತನಾಡಿದ್ದು, ಜಿಮ್​ನಲ್ಲಿ ಭಾರವಾದ ವಸ್ತು ಎತ್ತುವ ಮುನ್ನ ಎಚ್ಚರ ವಹಿಸಿ ಎಂದು ಸಲಹೆ ನೀಡಿದ್ದಾರೆ.

ಪ್ರಕರಣದ ಹಿನ್ನೆಲೆ:

ಮಂಗಳೂರು ಮೂಲದ ವಿನಯಾ ಕುಮಾರಿ (35) ಜಿಮ್​ನಲ್ಲಿ ವರ್ಕೌಟ್ ಮಾಡುವ ವೇಳೆ ಮೃತಪಟ್ಟಿದ್ದರು. ಖಾಸಗಿ ಕಂಪೆನಿಯಲ್ಲಿ ಉದ್ಯೋಗಿಯಾಗಿದ್ದ ಯುವತಿ ಸಾವನ್ನಪ್ಪಿದ್ದ ಬಗ್ಗೆ ಬೈಯಪ್ಪನಹಳ್ಳಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು. ಮಾರ್ಚ್ 26 ರಂದು ಘಟನೆ ನಡೆದಿತ್ತು.