ಜಿಲ್ಲೆ

ಇಸ್ರೋ ವಿಜ್ಞಾನಿಗೆ ಜ್ಞಾನೇಂದ್ರ ಸನ್ಮಾನ

Shivamogga - Desk - Praveena Kumar S

ತೀರ್ಥಹಳ್ಳಿ: ಚಂದ್ರಯಾನ-3ರ ಇಸ್ರೋ ವಿಜ್ಞಾನಿಗಳ ತಂಡದಲ್ಲಿದ್ದ ತಾಲೂಕಿನ ಅರಳಸುರಳಿಯ ಹೆಮ್ಮೆಯ ವಿಜ್ಞಾನಿ ಸುಬ್ರಹ್ಮಣ್ಯ ಉಡುಪ ಅವರನ್ನು ಶಾಸಕ ಆರಗ ಜ್ಞಾನೇಂದ್ರ ಸನ್ಮಾನಿಸಿದರು. ಉಡುಪ ಅವರ ಅರಳಸುರಳಿಯ ಮನೆಗೆ ಶನಿವಾರ ಭೇಟಿ ನೀಡಿದ ಶಾಸಕರು ಸಾಧನೆಗೆ ಹರ್ಷ ವ್ಯಕ್ತಪಡಿಸಿದರು. ಈ ವೇಳೆ ಕುಟುಂಬ ಸದಸ್ಯರು ಇದ್ದರು.