ಜಿಲ್ಲೆ

ಪಂಚಮ ಶಿವಲಿಂಗೇಶ್ವರ ಸ್ವಾಮೀಜಿಗೆ ಡಾಕ್ಟರೇಟ್ ‌ಪ್ರದಾನ

ಮಂಜುನಾಥ ಕೋಳಿಗುಡ್ಡ

- ದಡಾಕ್ಟರ್ ಆಫ್ ಲೆಟರ್ಸ್' ಗೌರವ ಡಾಕ್ಟರೇಟ್

ಬೆಳಗಾವಿ :ಕ್ಷಣಿಕ ಅರಿವನ್ನು ಬಿತ್ತುವ ಜೊತೆಯಲ್ಲಿ ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಯಲ್ಲಿ ಅಪಾರ ಜ್ಞಾನವನ್ನು ಹೊಂದಿರುವ ನಿಡಸೋಶಿ ದುರದುಂಡೇಶ್ವರ ಸಿದ್ಧಸಂಸ್ಥಾನ ಮಠದ ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ ಅವರಿಗೆ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ ಡಾಕ್ಟರ್ ಆಫ್ ಲೆಟರ್ಸ್ ಪದವಿ ಪ್ರದಾನ ಮಾಡಿ ಗೌರವಿಸಿದೆ.

ಬೆಳಗಾವಿ ವಿಟಿಯು ಸಭಾಂಗಣದಲ್ಲಿ ಶುಕ್ರವಾರ ರಾಣಿ ಚನ್ನಮ್ಮ ವಿವಿ ಹಮ್ಮಿಕೊಂಡಿದ್ದ 13ನೇ ಘಟಿಕೋತ್ಸವದಲ್ಲಿ ರಾಜ್ಯಪಾಲ ತಾವರಚಂದ ಗೆಹ್ಲೋಟ್ ಡಾಕ್ಟರೇಟ್ ಪದವಿ‌ಮಾಡಿದರು.

ಸಮಕಾಲನ ಸಾಮಾಜಿಕ ಹರಿಕಾರರಾಗಿ ಸಮ ಸಮಾಜದ ನಿರ್ಮಾಣಕ್ಕೆ ಸದಾ ಕಟಿಬದ್ಧರಾಗಿದ್ದಾರೆ. ಅವರು ಚಿಕ್ಕಮಗಳೂರು ಜಿಲ್ಲೆಯ ಕಡೂರಿನಲ್ಲಿ 08 ಜೂನ್. 1944ರಲ್ಲಿ ಜನಿಸಿದರು. ಆಯಸ್ಸಿನಲ್ಲಿ ತಮ್ಮ 16ನೇ ಪ್ರಶಾಸ್ತ್ರದಲ್ಲಿ ಸುದೀರ್ಘ ಅಧ್ಯಯನ ಮಾಡಿ ಸನ್ಯಾಸ ದೀಕ್ಷೆ ಪಡೆದು ಸಾಹಿತ್ಯ ಮತ್ತು ತತ್ವಶಾಸ್ತ್ರದಲ್ಲಿ ಶತಮಾನಗಳೆ ಚಾರಿತ್ರಿಕ, ಆಧ್ಯಾತ್ಮಿಕ ಹಿರಿನ ಕಾರಂಗತರಾದರು. ನಂತರದಲ್ಲಿ ಸುಮಾರು ಮೂರು ಶತಮಾನಗಳೆ ಹಿರಿಮೆಯನ್ನು ಸಿದ್ಧ ಸಂಸ್ಥಾನ ಮಠದ ಸ್ವಾಮೀಜಿಯಾಗಿ ನೊಂದಿರುವ ನಿಡಸೋಶಿಯ ಶ್ರೀ ಜಗದ್ಗುರು ದುರುದುಂಡೇಶ್ವರ ಸಿದ್ದ ಮೃ ಸುತ್ತಲಿನ ಪರಿಸರವನ್ನು ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ತಿದ್ದಿ ಆಧ್ಯಾತ್ಮದ ಅರಿವನ್ನು ಮೂಡಿಸುವ ಮೂಲಕ ಶ್ರೀಯುತರು ಸದಾ ಪೂಜನೀಯರಾಗಿದ್ದಾರೆ.

ಗಡಿ ಭಾಗದಲ್ಲಿ ಬರಪೀಡಿತ ಹಳ್ಳಿಗಳ ರೈತರಿಗೆ ಇವರು ಏತ ನೀರಾವರಿ ಮೂಲಕ ಶಾಶ್ವತ ನೀರಾವರಿ -ಸಿರುವರು. ಸಾವಯವ ಬೇಸಾಯವನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸೋಯಾ, ಅವರೆಯಂತದ ಅನ್ಯಗಳ ಗ್ರಾಮೀಣ ತಳಿಗಳ ಬೀಜಗಳನ್ನು ಕೃಷಿ ವಿಶ್ವವಿದ್ಯಾಲಯಕ್ಕೆ ಪೂರೈಸುತ್ತಿರುವರು. ಉತರ ಕರ್ನಾಟಕದ ಮಹಿಳೆಯರ ಬದುಕನ್ನು ಛಿದ್ರಗೊಳಿಸಿದ ದೇವಾದಾಸಿ ಪಿಡುಗನ್ನು ನ್ನು ಹೋಗಲಾಡಿಸಿ ಶ್ರೀರ ಮುದಾಯದಲ್ಲಿ ಆತ್ಮಸ್ಥೆರ್ಯವನ್ನು ತುಂಬಲು ಕಟಿಬದ್ಧರಾದ ಶ್ರೀ ಶಿವಲಿಂಗೇಶ್ವರ ಶಿವಲಿಂಗೇಶ್ವರ ಸ್ವಾಮೀಜಿ ಕಾರ್ಯ ಶ್ಲಾಘನೀಯ .

ತಮ್ಮ ಸಾಮಾಜಿಕ-ಆಧ್ಯಾತ್ಮಿಕ ಚಿಂತನೆಯೊಂದಿಗೆ ಸ್ವಾಮೀಜಿಯವರ ಸಾಹಿತ್ಯ ಸೇವೆಯೂ ಬರವಾದುದು. ನಾಲ್ಕು ಪುರಾಣ, ಆರು ಸಂಶೋಧನಾ ಕೃತಿ, ಹತ್ತು ಜೀವನ ಚರಿತ್ರೆ ಹಾಗೂ ಆರು ಷಾಂತರ ಪುಸ್ತಕಗಳನ್ನು ಪ್ರಕಟಿಸುವ ಮೂಲಕ ಅರಿವನ್ನು ಅಕ್ಷರವಾಗಿಸಿರುವುದು ಗಮನಾರ್ಹವಾಗಿದೆ.

ಆಧ್ಯಾತ್ಮಿಕ, ಸಾಮಾಜಿಕ, ಸಾಹಿತ್ಯಕ ಮತ್ತು ಶೈಕ್ಷಣಿಕ ಸಾಧನೆಯನ್ನು ಸೇವಾ ಮನೋಭಾವದಿಂದ ದುಡಿರುವುದು ಇವರ ಮಹೋನ್ನತ ಸಾಧನೆಯಾಗಿದೆ.

ಕೃಷಿ, ಶಿಕ್ಷಣ ಮತ್ತು ಸಾಮಾಜಿಕ ಸೌಹಾರ್ದತೆಯನ್ನು ಪರಿಗಣಿಸಿ ಮನೆ ಆಧ್ಯಾತ್ಮಿಕ ಹಿರಿಮೆಯನ್ನು ಗುರುತಿಸಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯವು ಡಾಕ್ಟರೇಟ್ ನೀಡಿ ಗೌರವಿಸಿದೆ.