ಜಿಲ್ಲೆ

ಗುತ್ತಲ ದಸರಾ ಉತ್ಸವಕ್ಕೆ ಚಾಲನೆ ಅ. 3ರಂದು

ವಿವೇಕಾನಂದ ದಾಸನಕೊಪ್ಪ

ಗುತ್ತಲ: ಗುತ್ತಲ ದಸರಾ ಉತ್ಸವಕ್ಕೆ ನೆಗಳೂರ ಸಂಸ್ಥಾನ ಹಿರೇಮಠದ ಶ್ರೀ ಗುರುಶಾಂತೇಶ್ವರ ಶಿವಾಚಾರ್ಯ ಸ್ವಾಮೀಜಿ ಹಾಗೂ ಗುತ್ತಲ ಕಲ್ಮಠದ,- ಅಗಡಿ ಪ್ರಭುಸ್ವಾಮಿ ಮಠದ ಶ್ರೀಗುರುಸಿದ್ಧ ಸ್ವಾಮೀಜಿ ಅ. 3ರಂದು ಸಂಜೆ 5 ಗಂಟೆಗೆ ಪಟ್ಟಣದ ಪೊಲೀಸ್​ ಠಾಣೆಯ ಆವರಣದಲ್ಲಿ ಚಾಲನೆ ನೀಡಲಿದ್ದಾರೆ.

ನಾಡದೇವಿ ಚಾಮುಂಡೇಶ್ವರಿಗೆ ದೇವಿಗೆ ಗುತ್ತಲ ಠಾಣೆಯ ಪಿಎಸ್​ಐ ಬಸನಗೌಡ ಬಿರಾದಾರ ಪ್ರಥಮ ಪೂಜೆ ಸಲ್ಲಿಸುವರು. ನಂತರ ಪಟ್ಟಣದ ಪ್ರಮುಖ ಬೀದಿಗಳಲ್ಲಿ ವಿವಿಧ ವಾದ್ಯಗಳ ಮೂಲಕ ಅಲಂಕೃತ ಮಂಟಪದಲ್ಲಿ ದೇವಿಯ ಭವ್ಯ ಮೆರವಣಿಗೆ ಜರುಗುವುದು. ನಂತರ ರಾತ್ರಿ ಎಲೆಪೇಟೆಯಲ್ಲಿರುವ ಚೌತ ಕಟ್ಟಿಯಲ್ಲಿ ದೇವಿ ಪ್ರತಿಷ್ಠಾಪಿಸಲಾಗುವುದು.

ಗುತ್ತಲ ದಸರಾ- 2024ರ ಅಂಗವಾಗಿ ಅ. 8ರಂದು ಬೆಳಗ್ಗೆ 10ರಿಂದ ಮಧ್ಯಾಹ್ನ 2ಗಂಟೆಯವರೆಗೆ ಸಮುದಾಯ ಆರೋಗ್ಯ ಕೇಂದ್ರದಲ್ಲಿ ವಿವಿಧ ತಜ್ಞ ವೈದ್ಯರಿಂದ ಉಚಿತ ಆರೋಗ್ಯ ತಪಾಸಣೆ ಹಾಗೂ ರಕ್ತದಾನ ಶಿಬಿರ ಜರಗುವುದು. ಸಂಜೆ 7ಕ್ಕೆ ಹಾವೇರಿ-ಬ್ಯಾಡಗಿಯ ಪೃಥ್ವಿ ಕಲಾ ತಂಡದಿಂದ ಮನರಂಜನಾ ಕಾರ್ಯಕ್ರಮ ಜರಗುವುದು.

9ರಂದು ಸಂಜೆ 7ಕ್ಕೆ ಗುತ್ತಲದ ಸ್ವಾಮಿ ಮೆಲೋಡಿಯಸ್​ ತಂಡದಿಂದ ಸಾಂಸತಿಕ ಕಾರ್ಯಕ್ರಮ ಜರುಗುವುದು. 10ರಂದು ಸಂಜೆ 7ಕ್ಕೆ ಯುವ ದಸರಾ ಹಾಗೂ ದಸರಾ ಕಾರ್ಯಕ್ರಮದ ಸಮಾರೋಪ ಸಮಾರಂಭ ನೆರವೇರುವುದು ಎಂದು ದಸರಾ ಉತ್ಸವ ಸಮಿತಿ ಕಾರ್ಯದಶಿರ್ ಪ್ರದಿಪ ಸಾಲಗೇರಿ ಹಾಗೂ ಅಧ್ಯಕ್ಷ ಚನ್ನಪ್ಪ ಕಲಾಲ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.