ಹುಬ್ಬಳ್ಳಿ: ತಾಲೂಕಿನ ಹೆಬಸೂರ ವಿದ್ಯಾ ಪ್ರಸಾರ ಸಮಿತಿಯ ಹೆಬಸೂರ ಸೆಕೆಂಡರಿ ಸ್ಕೂಲ್ನಲ್ಲಿ 1998-99ನೇ ಸಾಲಿನ ಎಸ್ಎಸ್ಎಲ್ಸಿ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಂದ ಗುರುವಂದನಾ ಕಾರ್ಯಕ್ರಮ ಮತ್ತು ಸ್ನೇಹ ಸಮ್ಮೇಳನವನ್ನು ನ. 25ರಂದು ಬೆಳಗ್ಗೆ 9ಕ್ಕೆ ಏರ್ಪಡಿಸಲಾಗಿದೆ.
ಪಾಠ ಕಲಿಸಿ ಉತ್ತಮ ಮಾರ್ಗದರ್ಶನ ನೀಡಿ ಸಮಾಜದಲ್ಲಿ ಉತ್ತಮ ನಾಗರಿಕರನ್ನಾಗಿ ಮಾಡಿದ ಪೂಜ್ಯ ಗುರುಗಳಿಗೆ ಗೌರವ ಸನ್ಮಾನ ನಡೆಯಲಿದೆ ಎಂದು ಹಳೆಯ ವಿದ್ಯಾಥಿರ್ಗಳು ತಿಳಿಸಿದ್ದಾರೆ.
ಹೊಸಳ್ಳಿಯ ಸಂಸ್ಥಾನಮಠ ಶ್ರೀ ಅಭಿನವ ಬೂದೀಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ವಿದ್ಯಾ ಪ್ರಸಾರ ಸಮಿತಿ ಅಧ್ಯಕ್ಷ ರಾಮಚಂದ್ರ ಮಾಡಳ್ಳಿ ಅಧ್ಯಕ್ಷತೆ ವಹಿಸುವರು. ಗ್ರಾಮೀಣ ಬಿಇಒ ಉಮೇಶ ಬೊಮ್ಮಕ್ಕನವರ ಕಾರ್ಯಕ್ರಮ ಉದ್ಘಾಟಿಸುವರು.
ಹೆಬಸೂರ ಸೆಕೆಂಡರಿ ಸ್ಕೂಲ್ ಮುಖ್ಯಾಧ್ಯಾಪಕಿ ಎಸ್.ವೈ. ಗುಡರಡ್ಡಿ ಅತಿಥಿಗಳಾಗಿ ಪಾಲ್ಗೊಳ್ಳುವರು.
ಗುರುಗಳಾದ ಎಂ.ಜಿ. ಹೊಸಭಾವಿ, ವಿ.ಜಿ. ಜೋಶಿ, ಕೆ.ಎಂ. ಹೆಬಸೂರ, ಪಿ.ಬಿ. ಶಿವಪುರ, ಜಿ. ಚನ್ನಬಸವಸ್ವಾಮಿ, ಎಸ್.ಎಂ. ದೇವಋಷಿ, ಬಿ.ಆರ್. ಲಿಂಗರಡ್ಡಿ, ಯು.ಬಿ. ಗುಳ್ಳಣ್ಣವರ, ಎಂ.ಎಸ್. ದಾಡಿಬಾವಿ, ಜೆ.ಎನ್. ನಿಟಾಲಿ, ಜಿ.ಟಿ. ನಾಗರಡ್ಡಿ, ಸಿ.ಎ. ಅಂಗಡಿ, ರವಿ ಕೊಣ್ಣೂರ,
ಜಿ.ಬಿ. ಯರಗುಪ್ಪಿ, ಬಿ.ಎಂ. ಮಾದರ ಅವರನ್ನು ಸನ್ಮಾನಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.
ಹನುಮಂತ ಪೆಂಟಿ, ಮಂಜುನಾಥ ಮಂಗೂಣಿ ಹಾಗೂ ಸಂಗಡಿಗರು ಸಂಗೀತ ಸೇವೆ ನೀಡುವರು.