ಹಾರಕೂಡ ಶ್ರೀಮಠದಲ್ಲಿ ಶ್ರೀ ಗುರುಲಿಂಗ ಶಿವಾಚಾರ್ಯ ಉಚಿತ ವಸತಿ ಪ್ರಾಥಮಿಕ ಹಾಗೂ ಪ್ರೌಢಶಾಲೆ ಶಿಕ್ಷಕರಿಂದ ಸೋಮವಾರ ಆಯೋಜಿಸಿದ್ದ ಗುರುವಂದನೆ ಹಾಗೂ ೬೭೭ನೇ ತುಲಾಭಾರ ಕಾರ್ಯಕ್ರಮವನ್ನು ಶ್ರೀ ಡಾ.ಚನ್ನವೀರ ಶಿವಾಚಾರ್ಯರು ಉದ್ಘಾಟಿಸಿದರು. ಮಲ್ಲಿನಾಥ ಹಿರೇಮಠ, ಐ.ಜಿ. ಮಠಪತಿ, ಪರಮೇಶ್ವರ ಹೊಳಕುಂದೆ, ಅಲ್ಲಮ್‌ಪ್ರಭು ಹಿರೇಮಠ, ಜ್ಯೋತಿ ಕೆರಗೋಟೆ, ಕಮಲಕರ ಹತ್ತರಗಾ, ಅಪ್ಪಣ್ಣ ಜನವಾಡ ಇತರರಿದ್ದರು. 
ಜಿಲ್ಲೆ

ದಯೆ-ಪ್ರೀತಿ ಭಗವಂತನ ಭಾಷೆ

ಬಸವಕಲ್ಯಾಣ: ದಯೆ ಮತ್ತು ಪ್ರೀತಿ ಇವು ಭಗವಂತನ ಭಾಷೆಯಾಗಿದ್ದು, ಈ ಭಾಷೆ ಅರ್ಥವಾಗಬೇಕಾದರೆ ನಾವು ಸಂಪೂರ್ಣ ಶೂನ್ಯ ಭಾವದಿಂದ ದೈವ ಸನ್ನಿಧಿಯನ್ನು ಪ್ರಾರ್ಥಿಸಬೇಕು ಎಂದು ಹಾರಕೂಡ ಸಂಸ್ಥಾನ ಹಿರೇಮಠದ ಪೀಠಾಧಿಪತಿ ಶ್ರೀ ಡಾ.ಚನ್ನವೀರ ಶಿವಾಚಾರ್ಯರು ನುಡಿದರು.

ಹಾರಕೂಡ ಶ್ರೀಮಠದಲ್ಲಿ ಶ್ರೀ ಗುರುಲಿಂಗ ಶಿವಾಚಾರ್ಯ ಉಚಿತ ವಸತಿ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರಿಂದ ಸೋಮವಾರ ಆಯೋಜಿಸಿದ್ದ ಗುರುವಂದನೆ ಹಾಗೂ ೬೭೭ನೇ ತುಲಾಭಾರ ಸೇವೆ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದ ಶ್ರೀಗಳು, ಆಧ್ಯಾತ್ಮಿಕ ಛಲ, ದೈಹಿಕ-ಮಾನಸಿಕ ಬಲ ಮತ್ತು ದೈವಿಕ ಹಂಬಲವಿದ್ದರೆ ಗುರುದೇವನ ಕೃಪೆ ಜಲಪಾತದೋಪಾದಿಯಲ್ಲಿ ಹರಿದು ಬರುತ್ತದೆ ಎಂದರು.

ಸಮಾಜದ, ರಾಷ್ಟçದ ಫಲವತ್ತತೆ ವೃದ್ಧಿಸುವಲ್ಲಿ ಧರ್ಮಾಧ್ಯಾತ್ಮ ಗುರುಗಳು ಹಾಗೂ ವಿದ್ಯಾಗುರುಗಳ ಪಾತ್ರ ಹಿರಿಯದಾಗಿದೆ. ಶಿಕ್ಷಣ ಮತ್ತು ಧರ್ಮ ಸಂಸ್ಕಾರ ಜತೆ ಜತೆಗೆ ಸಾಗಿದಾಗ ಬದುಕು ಚಲನಶೀಲಗೊಂಡು ಸಮತೋಲನ ಕಾಯ್ದುಕೊಳ್ಳಲು ಸಾಧ್ಯವಾಗುತ್ತದೆ. ಯಾವುದೇ ಕ್ಷೇತ್ರದಲ್ಲಿ ಬದ್ಧತೆಯ ದುಡಿಮೆಯಿಂದ ಕೃಷಿ ಮಾಡಿದರೆ ಯಶಸ್ಸಿನ ಫಸಲು ಪಡೆಯಲು ಸಾಧ್ಯವಾಗುತ್ತದೆ. ಪರಿಶ್ರಮ ಪ್ರಯತ್ನವಿದ್ದಲ್ಲಿ ಪರಮಾತ್ಮನ ಕೃಪೆ ಇರುತ್ತದೆ ಎಂದು ಹೇಳಿದರು.

ಮಲ್ಲಿನಾಥ ಹಿರೇಮಠ ಹಾರಕೂಡ, ಶಿಕ್ಷಕರಾದ ಅಲ್ಲಮ್‌ಪ್ರಭು ಹಿರೇಮಠ, ಭೀಮಶ ಜೋಜನೆ, ಸುಭಾಷ ರೆಡ್ಡಿ, ಕಮಲಾಕರ ಹತ್ತರಗಾ, ಪಂಡಿತ ಬಿರಾದಾರ, ಪ್ರಲ್ಹಾದ ಚೌವ್ಹಾಣ್, ಶಿವಾನಂದ ಪೂಜಾರಿ, ಮಂಜುಳಾ ಹರಕೆ, ಲಲಿತಾ ಬೊಂಬಲೆ, ಶೋಭಾ ಟೋಣಪೆ, ಜ್ಯೋತಿ ಕೆರಗೋಟೆ, ಸುರೇಖಾ ಜಮಾದಾರ, ಮರೆಮ್ಮ ಚೌಧರಿ, ಅಂಜನಾ ಜಮಾದಾರ, ಪವಿತ್ರಾ ಘಾಳೆ, ಭವಾನಿ ಬೊಂಬಲೆ, ದಾನಮ್ಮ ಜೋಜನ ಇತರರಿದ್ದರು.

ಶಾಲೆ ಆಡಳಿತಾಧಿಕಾರಿ ಐ.ಜಿ. ಮಠಪತಿ ಸ್ವಾಗತಿಸಿದರು. ಪರಮೇಶ್ವರ ಹೊಳಕುಂದೆ ವಂದಿಸಿದರು. ಸುಭಾಷರಡ್ಡಿ ನಿರೂಪಣೆ ಮಾಡಿದರು. ಕಾರ್ತಿಕ ಸ್ವಾಮಿ ಯಲದಗುಂಡಿ ಪ್ರಾರ್ಥನಾ ಗೀತೆ ನಡೆಸಿಕೊಟ್ಟರು.