ಕಂಪ್ಲಿಯ ಕಲ್ಮಠದಲ್ಲಿ ಏರ್ಪಡಿಸಿದ್ದ ಗುರುವಂದನಾ ಕಾರ್ಯಕ್ರಮದಲ್ಲಿ ಕಲ್ಮಠ ಪ್ರಭುಸ್ವಾಮಿಗಳ ಪ್ರೌಢಶಾಲೆ ಮಾಜಿ ಕಾರ್ಯದರ್ಶಿ ಪಿ.ಎಂ.ಮಲ್ಲಿಕಾರ್ಜುನ ಸ್ವಾಮಿ ಮಾತನಾಡಿದರು. ಶಿಕ್ಷಕರಾದ ಎಚ್.ಎಂ.ಗೌರಮ್ಮ, ಜೆ.ಬಸವರಾಜ, ಶರಣಪ್ಪ ಸಿಂಗಾಡಿ, ಜಿತೇಂದ್ರ, ಗುರುಬಸಪ್ಪ ಪಟ್ಟಣಶೆಟ್ಟಿ ಇದ್ದರು. 
ಜಿಲ್ಲೆ

ಮಕ್ಕಳಿಗೆ ಮಾನವೀಯ ಮೌಲ್ಯಗಳ ಕಲಿಸಿ

ಕಂಪ್ಲಿ: ಮಕ್ಕಳಿಗೆ ಸಂಸ್ಕಾರ, ಆಚಾರ ವಿಚಾರ, ಮಾನವೀಯ ಮೌಲ್ಯಗಳನ್ನು ಕಲಿಸುವಲ್ಲಿ ಪಾಲಕರು ಮುಂದಾಗಬೇಕು ಎಂದು ಇಲ್ಲಿನ ಪ್ರಭುಸ್ವಾಮಿಗಳ ಕಲ್ಮಠ ಪ್ರೌಢಶಾಲೆಯ ಮಾಜಿ ಕಾರ್ಯದರ್ಶಿ ಪಿ.ಎಂ.ಮಲ್ಲಿಕಾರ್ಜುನಸ್ವಾಮಿ ಹೇಳಿದರು.

ಆದರ್ಶಗಳನ್ನು ನಿತ್ಯ ಜೀವನದಲ್ಲಿಯೂ ಅಳವಡಿಸಿಕೊಳ್ಳಿ

ಇಲ್ಲಿನ ಕಲ್ಮಠದ ಆವರಣದಲ್ಲಿ 1994-95ನೇ ಸಾಲಿನ 10ನೇ ತರಗತಿ ವಿದ್ಯಾರ್ಥಿಗಳ ಬಳಗ ಭಾನುವಾರ ಹಮ್ಮಿಕೊಂಡಿದ್ದ ಗುರುವಂದನಾ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದರು. ಶಾಲೆ ಅವಧಿಯಲ್ಲಿ ಕಲಿತ ಶಿಸ್ತು ಮತ್ತು ಆದರ್ಶಗಳನ್ನು ನಿತ್ಯ ಜೀವನದಲ್ಲಿಯೂ ಅಳವಡಿಸಿಕೊಳ್ಳಬೇಕು. ಕಲಿತ ಶಾಲೆ, ಕಲಿಸಿದ ಗುರುಗಳನ್ನು ಮರೆಯಬಾರದು ಎಂದರು.

ಕಲ್ಮಠದ ಅಭಿನವ ಪ್ರಭು ಸ್ವಾಮೀಜಿ ಸಾನ್ನಿಧ್ಯವಹಿಸಿದ್ದರು. ಶಿಕ್ಷಕರಾದ ಎಚ್.ಎಂ.ಗೌರಮ್ಮ, ಜೆ.ಬಸವರಾಜ, ಶರಣಪ್ಪ ಸಿಂಗಾಡಿ, ಜಿತೇಂದ್ರ, ಗುರುಬಸಪ್ಪ ಪಟ್ಟಣಶೆಟ್ಟಿ, ಡಿ.ಎಂ.ಶಶಿಧರ, ಎಂ.ಎಸ್.ಮಂಜುನಾಥ, ಬಿ.ಎಂ.ಸೋಮನಾಥ, ವಿ.ಕೃಷ್ಣಪ್ಪ, ಎಸ್.ಎಂ.ಹಂಪಯ್ಯ ಅವರನ್ನು ಸನ್ಮಾನಿಸಲಾಯಿತು. ಹಳೇ ವಿದ್ಯಾರ್ಥಿಗಳಾದ ಜಯಚಂದ್ರಿಕಾ, ಟಿ.ಎಂ.ಮಂಗಳಗೌರಿ, ಬಸಮ್ಮ, ಸಪ್ಪರದ ರಾಘವೇಂದ್ರ, ಎನ್.ಎಂ.ಅಶೋಕ, ರಾಜಶೇಖರ್, ಶರಣಪ್ಪ ಸಜ್ಜನರ, ಡಾ.ಬಿ.ಸುನೀಲ್, ಎಚ್.ಲೋಕೇಶ್ ಇತರರಿದ್ದರು.