ಮುನಿಯಾಲು ಸರ್ಕಾರಿ ಪ್ರೌಢಶಾಲೆ ಹಿರಿಯ ವಿದ್ಯಾರ್ಥಿಗಳಿಂದ ನಿವೃತ್ತ ಮುಖ್ಯ ಶಿಕ್ಷಕಿ ಸ್ನೇಹಲತಾ ಟಿ.ಜಿ. ಅವರಿಗೆ ಗುರುವಂದನೆ ನಡೆಯಿತು 
ಜಿಲ್ಲೆ

ಆತ್ಮವಿಶ್ವಾಸ ರೂಪಿಸುವುದೇ ಗುರುವಿನ ಗುರಿ: ಗುರುವಂದನಾ ಕಾರ್ಯಕ್ರಮದಲ್ಲಿ ಸ್ನೇಹಲತಾ ಟಿ.ಜಿ. ಸಲಹೆ

ಇಂದಿರಾ ಎನ್ ಕೆ

ಹೆಬ್ರಿ: ವಿದ್ಯಾರ್ಥಿಗಳಿಗೆ ಪಾಠದ ಜತೆಗೆ ಮಾನವೀಯ ಮೌಲ್ಯ, ಜೀವನ ನಡೆಸಲು ಬೇಕಾದ ಧೈರ್ಯ, ಆತ್ಮವಿಶ್ವಾಸ ರೂಪಿಸುವುದೇ ಗುರುವಿನ ಶಿಕ್ಷಣದ ರೀತಿಯಾಗಿರಬೇಕು ಎಂದು ನಿವೃತ್ತ ಮುಖ್ಯ ಶಿಕ್ಷಕಿ ಸ್ನೇಹಲತಾ ಟಿ.ಜಿ. ಹೇಳಿದರು.
ಮುನಿಯಾಲು ಸರ್ಕಾರಿ ಪ್ರೌಢಶಾಲೆಯ 1990-91ನೇ ಸಾಲಿನ ಹಿರಿಯ ವಿದ್ಯಾರ್ಥಿಗಳು ನಡೆಸಿದ ಗುರುವಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಅಶೋಕ್‌ಪೂಜಾರಿ ಮುದ್ರಾಡಿ, ನಾಗರಾಜ್ ಪೈ, ಶ್ಯಾಮಲಾ ಪ್ರಭು, ಶಶಿಕಲಾ ಶೆಟ್ಟಿ ಮಣಿಪಾಲ, ರವಿ ಶೆಟ್ಟಿ, ಸುಶೀಲಾ ನಾಯಕ್, ಸುಕನ್ಯಾ ಶೆಟ್ಟಿ, ರೇವತಿ ನಾಯಕ್ ಕಡ್ತಲ, ದಿನೇಶ್ ಶೆಟ್ಟಿ, ನಾಗೇಶ್ ಜೋಯಿಸ್, ಪಾರ್ಶ್ವನಾಥ್ ಜೈನ್, ಪ್ರೇಮಾ ಶೆಟ್ಟಿ, ಸುಗುಣಾ ದೇವಾಡಿಗ, ಲತಾ ಶೆಟ್ಟಿ ಭಕ್ರೆ, ಹರೀಶ್ ನಾಯ್ಕ್, ನಿವೃತ್ತ ಬ್ಯಾಂಕ್ ಉದ್ಯೋಗಿ ಟಿ.ಜಿ.ಆಚಾರ್ಯ, ರಮ್ಯಾ ಭಟ್ ಬಲ್ಲಾಡಿ, ಶ್ರೇಯಸ್ ಆಚಾರ್ಯ ದೀಕ್ಷಾ ಆಚಾರ್ಯ ಉಪಸ್ಥಿತರಿದ್ದರು. ಗೆಳೆಯರ ಬಳಗದ ರೂವಾರಿ ದಿಲೀಪ್ ಗೋವೆಕರ್ ಕಾರವಾರ ಅಧ್ಯಕ್ಷತೆ ವಹಿಸಿದ್ದರು. ರಾಮದಾಸ್ ನಾಯಕ್ ಕಾಡುಹೊಳೆ ಸ್ವಾಗತಿಸಿದರು. ಆಯೋಜಕರಾದ ಬಲ್ಲಾಡಿ ಚಂದ್ರಶೇಖರ ಭಟ್ ಮಾತನಾಡಿದರು. ಜನಾರ್ದನ್ ಆರ್ಚಾಯ ಪಡುಕುಡೂರು ನಿರೂಪಿಸಿದರು. ಉದಯ ನಾಯಕ್ ಎಳ್ಳಾರೆ ವಂದಿಸಿದರು.