ಜಿಲ್ಲೆ

ಶಿಕ್ಷಣದ ಮೂಲಕ ಸಂಪಾದನೆ ಸಾಧ್ಯ : ಗಣೇಶ್ ಪೂಂಜರಕೊಡಿ ಹೇಳಿಕೆ

ಸೌಮ್ಯ ಆರ್

ಬಂಟ್ವಾಳ: ಶಿಕ್ಷಣದ ಮೂಲಕ ಎಲ್ಲವನ್ನು ಸಂಪಾದನೆ ಮಾಡಲು ಸಾಧ್ಯವಿದೆ ಎಂದು ಯುವವಾಹಿನಿ ಮಾಜಿ ಅಧ್ಯಕ್ಷ ಗಣೇಶ್ ಪೂಂಜರಕೊಡಿ ಹೇಳಿದರು.

ಯುವವಾಹಿನಿ ಬಂಟ್ವಾಳ ವತಿಯಿಂದ ನಾರಾಯಣ ಪಲ್ಲಿಕಂಡ ಮನೆಯಲ್ಲಿ ನಡೆದ ಗುರುತತ್ವವಾಹಿನಿ ಮಾಲಿಕೆ 9ರ ಕಾರ್ಯಕ್ರಮದಲ್ಲಿ ಮಾತನಾಡಿದರು.

ನಿಕಟಪೂರ್ವ ಅಧ್ಯಕ್ಷ ಹರೀಶ್ ಕುದನೆ, ಮಾಜಿ ಅಧ್ಯಕ್ಷರಾದ ನಾಗೇಶ್ ಪೊನ್ನೊಡಿ, ಅರುಣ್ ಕುಮಾರ್, ಪ್ರೇಮನಾಥ ಕೆ., ರಾಜೇಶ್ ಸುವರ್ಣ, ಶಿವಾನಂದ ಎಂ., ನಿರ್ದೇಶಕರಾದ ಮಹೇಶ್ ಬೊಳ್ಳಾಯಿ, ಉದಯ್ ಮೇನಾಡು, ಸದಸ್ಯರಾದ ಪ್ರಶಾಂತ್ ಏರಮಲೆ, ಶೇಖರ್ ಕಲ್ಯಾಣಾಗ್ರಹಾರ, ಯತೀಶ್ ಬೊಳ್ಳಾಯಿ, ನಾಗೇಶ್ ಪೂಜಾರಿ ಏಲಬೆ, ಅರ್ಜುನ್ ಅರಳ, ಯಶೋಧರ್ ಕುದನೆ, ಶೈಲೇಶ್ ಕುಚ್ಚಿಗುಡ್ಡೆ, ಜೈದೀಪ್ ಏಲಬೆ, ಮಲ್ಲಿಕಾ ಪಚ್ಚಿನಡ್ಕ, ಸೂರಜ್ ತುಂಬೆ, ರಾಜೇಶ್ ಪೂಂಜರಕೋಡಿ, ಹರೀಶ್ ಅಜೆಕಲಾ ಮತ್ತಿತರರು ಉಪಸ್ಥಿತರಿದ್ದರು.

ನಾರಾಯಣ ಗುರು ತತ್ವ ಪ್ರಚಾರ ಹಾಗೂ ಅನುಷ್ಠಾನ ನಿರ್ದೇಶಕ ಪ್ರಜಿತ್ ಅಮೀನ್ ಏರಮಲೆ ಕಾರ್ಯಕ್ರಮ ನಿರ್ವಹಿಸಿದರು.