ಜಿಲ್ಲೆ

ನೇರ ನುಡಿಯ ಕಾಯಕದಿಂದ ಬೆಳಕು ನೀಡಿದವರು : ಪ್ರೇಮನಾಥ್ ಕೆ. ಬಣ್ಣನೆ

ಸೌಮ್ಯ ಆರ್

ಬಂಟ್ವಾಳ: ದೀನದಲಿತರ ಏಳಿಗೆಗಾಗಿ ವೇದೋಪನಿಷತ್ತುಗಳ ಆಳವಾದ ಅಧ್ಯಯನ ಮತ್ತು ತಪಸ್ಸಿನ ಫಲವನ್ನು ವಿನಿಯೋಗಿಸಿ, ತನ್ನ ನೆಲದ ನಡೆ, ನೇರ ನುಡಿಯ ಕಾಯಕದಿಂದ ಜೀವಿತ ಕಾಲದಲ್ಲೇ ಅಪೂರ್ವ ಫಲಿತಾಂಶದ ಬೆಳಕನ್ನು ಜಗತ್ತಿಗೆ ಇತ್ತವರು ನಾರಾಯಣ ಗುರುಗಳು ಎಂದು ಯುವವಾಹಿನಿ ಬಂಟ್ವಾಳ ಘಟಕದ ಮಾಜಿ ಅಧ್ಯಕ್ಷ ಪ್ರೇಮನಾಥ್ ಕೆ. ತಿಳಿಸಿದರು

ಯುವವಾಹಿನಿ ಬಂಟ್ಟಾಳ ಘಟಕದ ಸದಸ್ಯ ಸುನೀಲ್ ಸುವರ್ಣ ಮನೆಯಲ್ಲಿ ಗುರುತತ್ವವಾಹಿನಿ ಮಾಲಿಕೆ-28ರಲ್ಲಿ ಗುರುಸಂದೇಶ ನೀಡಿದರು.

ಯುವವಾಹಿನಿ ಬಂಟ್ವಾಳ ಘಟಕ ಅಧ್ಯಕ್ಷ ದಿನೇಶ್ ಸುವರ್ಣ ರಾಯಿ, ಆರೋಗ್ಯ ನಿರ್ದೇಶಕ ಮಹೇಶ್ ಬೊಳ್ಳಾಯಿ, ಮಾಜಿ ಅಧ್ಯಕ್ಷ ನಾಗೇಶ್ ಪೊನ್ನೋಡಿ, ಪ್ರೇಮನಾಥ್ ಕೆ, ಶಿವಾನಂದ ಎಂ, ಅರುಣ್ ಕುಮಾರ್, ರಾಜೇಶ್ ಸುವರ್ಣ, ಹರೀಶ್ ಎಸ್.ಕೋಟ್ಯಾನ್, ಸದಸ್ಯರಾದ ಹರೀಶ್ ಅಜೆಕಲಾ, ವಿಘ್ನೇಶ್ ಬೊಳ್ಳಾಯಿ, ಯತೀಶ್ ಬೊಳ್ಳಾಯಿ, ಪ್ರಶಾಂತ್ ಏರಮಲೆ, ಯಶೋಧರ ಕಡಂಬಲ್ಕೆ, ಯೋಗೀಶ್ ಕಲ್ಲಡ್ಕ, ಸುಲತಾ ಬಿ.ಸಿ.ರೋಡ್, ಅರ್ಜುನ್ ಅರಳ ಮತ್ತಿತರರು ಉಪಸ್ಥಿತರಿದ್ದರು. ನಾರಾಯಣ ಗುರು ತತ್ವ ಪ್ರಚಾರ ಮತ್ತು ಅನುಷ್ಠಾನ ನಿರ್ದೇಶಕ ಪ್ರಜಿತ್ ಏರಮಲೆ ಸ್ವಾಗತಿಸಿ, ವಂದಿಸಿದರು.