ಅಥಣಿ ಗ್ರಾಮೀಣ: ಆದಿಕಾಲದಿಂದಲೂ ಭಕ್ತರು ದಾರಿ ತಪ್ಪದಂತೆ ಸಂತ, ಶರಣರು ಒಳ್ಳೆಯ ಮಾರ್ಗ ತಿಳಿಸುತ್ತಾ ಬಂದಿದ್ದಾರೆ ಎಂದು ನದಿ ಇಂಗಳಗಾಂವದ ಸಿದ್ಧಲಿಂಗ ಸ್ವಾಮೀಜಿ ಹೇಳಿದರು.
ಅಥಣಿ ತಾಲೂಕಿನ ಹಲ್ಯಾಳ ಗ್ರಾಮದಲ್ಲಿ ಲಿಂ.ಗುರುಸಿದ್ಧ ಸ್ವಾಮೀಜಿ 44ನೇ ಪುಣ್ಯ ಸ್ಮರಣೋತ್ಸವ ನಿಮಿತ್ತ ಬುಧವಾರ ಹಮ್ಮಿಕೊಂಡಿದ್ದ ಷಟಸ್ಥಲ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಲಿಂ.ಗುರುಸಿದ್ಧ ಸ್ವಾಮೀಜಿ ಮಾನವಕುಲಕ್ಕೆ ಮಾದರಿಯಾಗಿದ್ದಾರೆ. ಅವರ ಸ್ಮರಣೋತ್ಸವ ನಿಮಿತ್ತ ಭಕ್ತರು ವಚನೋತ್ಸವ, ರಥೋತ್ಸವ ನೆರವೇರಿಸುತ್ತಿರುವುದು ಸಂತಸದ ಸಂಗತಿ ಎಂದರು.
ಸಾನ್ನಿಧ್ಯ ವಹಿಸಿದ್ದ ಶೇಗುಣಸಿ ವೀರಕ್ತಮಠದ ಡಾ.ಮಹಾಂತಪ್ರಭು ಸ್ವಾಮೀಜಿ ಮಾತನಾಡಿ, ಗುರುಸ್ಥುತಿ ಎನ್ನುವುದು ಮುದುಡಿದ ಮನಸ್ಸನ್ನು ಅರಳಿಸುವ ಹೂವಾಗಿದೆ ಎಂದರು.
ಹಲ್ಯಾಳ ವಿರಕ್ತಮಠದ ಪೀಠಾಧ್ಯಕ್ಷ ಗುರುಸಿದ್ಧ ಸ್ವಾಮೀಜಿ, ಮುಖಂಡರಾದ ಕುಮಾರ ಪಾಟೀಲ, ಚಂದ್ರಕಾಂತ ಕಾಗವಾಡ, ಮುದಕಪ್ಪ ಶೇಗುಣಸಿ, ಧರೆಪ್ಪ ಗುಮಚಿ, ಮಲ್ಲಪ್ಪ ಜಾಬಗೌಡರ, ಸಂಗಮೇಶ ಇಂಗಳಿ, ಮಂಜುನಾಥ ಶೇಡಶ್ಯಾಳ, ರಾವಸಾಬ ದೇಸಾಯಿ, ಮಹಾದೇವ ಮಡಿವಾಳ, ಬಸಪ್ಪ ಅಂಬಿ, ವಿಠ್ಠಲ ಮಂಗಸೂಳಿ, ಶಿವಯ್ಯ ಸಂಕ್ರಟ್ಟಿ, ಮುತ್ತಪ್ಪ ಹಲ್ಯಾಳ ಇತರರಿದ್ದರು.