ಬಂಟ್ವಾಳ: ಬ್ರಹ್ಮಶ್ರೀ ನಾರಾಯಣ ಗುರುಗಳು 1908ರಲ್ಲಿ ತಲಶ್ಶೇರಿಯಲ್ಲಿ ಶ್ರೀ ಜಗನ್ನಾಥ ದೇವಾಲಯದ ವಿಚಾರದಲ್ಲಿ ನಡೆಸಿದ ಹೋರಾಟದಂತೆ, ಅಂದು ನಡೆಸಿದ ಮೌನ ಕ್ರಾಂತಿಯ ಹೋರಾಟವು ಪ್ರಸ್ತುತ ಕಾಲಟ್ಟದಲ್ಲಿಯೂ ಸಕಾಲಿಕ ಎಂದು ಪ್ರಶಾಂತ್ ಎರಮಲೆ ಹೇಳಿದರು.
ಯುವವಾಹಿನಿ ಬಂಟ್ವಾಳ ಟಕದ ವತಿಯಿಂದ ಬಂಟ್ವಾಳ ತಾಲೂಕಿನ ನರಿಕೊಂಬು ಗ್ರಾಮದ ಪುತ್ರೋಟಿಬೈಲ್ನಲ್ಲಿ ನಡೆದ ಗುರುತತ್ವವಾಹಿನಿ 11ನೇ ಮಾಲಿಕೆಯಲ್ಲಿ ಮಾತನಾಡಿದರು.
ಶಿವಾನಂದ ಎಂ, ಯುವವಾಹಿನಿ ಬಂಟ್ವಾಳ ಟಕ ಉಪಾಧ್ಯಕ್ಷ ನಾರಾಯಣ ಪಲ್ಲಿಕಂಡ, ನಿರ್ದೇಶಕರಾದ ಮಹೇಶ್ ಬೊಳ್ಳಾಯಿ, ಹರಿಣಾ ನವೀಶ್ ನಾವುರ, ಕಿರಣ್ ರಾಜ್ ಪೂಂಜರೆಕೋಡಿ, ಮಾಜಿ ಅಧ್ಯಕ್ಷ ಪ್ರೇಮನಾಥ್ ಕರ್ಕೇರ, ರಾಮಚಂದ್ರ ಸುವರ್ಣ, ನಾಗೇಶ್ ಪೊನ್ನೋಡಿ, ರಾಜೇಶ್ ಸುವರ್ಣ, ಸದಸ್ಯರಾದ ಸುನೀಲ್ ಸಾಲ್ಯಾನ್ ಮದೋರ್ಳಿ, ಜೈದೀಪ್ ಏಲಬೆ, ನಾಗೇಶ್ ಪೂಜಾರಿ ಏಲಬೆ, ಚಿನ್ನ ಕಲ್ಲಡ್ಕ, ಜಗನ್ನಾಥ್ ಕಲ್ಲಡ್ಕ, ಯತೀಶ್ ಬೊಳ್ಳಾಯಿ, ಯಶೋಧರ್ ಕಟ್ಟತ್ತಿಲ, ಯತೀಶ್ ಕರ್ಕೇರ, ಹರೀಶ್ ಅಜೆಕಲ, ಸೂರಜ್ ತುಂಬೆ ಮತ್ತಿತರರು ಉಪಸ್ಥಿತರಿದ್ದರು. ನಾರಾಯಣಗುರು ತತ್ವ ಪ್ರಚಾರ ಅನುಷ್ಠಾನ ನಿರ್ದೇಶಕರಾದ ಪ್ರಜಿತ್ ಅಮೀನ್ ಏರಮಲೆ ನಿರ್ವಹಿಸಿದರು.