Guru's guidance is essential 
ಜಿಲ್ಲೆ

ಗುರುವಿನ ಮಾರ್ಗದರ್ಶನ ಅವಶ್ಯ

Vijayapura - Desk - Doddanagouda Gudihindin

ರಬಕವಿ/ಬನಹಟ್ಟಿ: ಜೀವನ ಸಾರ್ಥಕವಾಗಲು ಗುರುವಿನ ಮಾರ್ಗದರ್ಶನ ಅವಶ್ಯಕ ಎಂದು ನಿವೃತ್ತ ಶಿಕ್ಷಕ ಎಸ್.ಎಸ್. ಹಿರೇಮಠ ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್‌ನಿಂದ ಭಾನುವಾರ ಬನಹಟ್ಟಿಯ ಮಹಾದೇವಪ್ಪ ಎಂ. ಭದ್ರನ್ನವರ ಬಂಗಲೆಯಲ್ಲಿ ಹಮ್ಮಿಕೊಂಡಿದ್ದ ಪುಸ್ತಕಾವಲೋಕನ-38ರ ಕಾರ್ಯಕ್ರಮದಲ್ಲಿ ಶಿವಾನಂದ ಬಾಗಲಕೋಟಮಠ ಅವರ ವಚನ ಕಿರಣ ಕೃತಿಯನ್ನು ಅವಲೋಕಿಸಿ ಮಾತನಾಡಿದ ಅವರು, ಸ್ವಾರ್ಥವಿಟ್ಟುಕೊಂಡು ತೋರಿಕೆಗೆ ದಾನ ಮಾಡಬಾರದು ಎಂದರು.

ಬನಹಟ್ಟಿ ಸಹಕಾರಿ ನೂಲಿನ ಗಿರಣಿ ಉಪಾಧ್ಯಕ್ಷ ರಾಜೇಂದ್ರ ಭದ್ರನ್ನವರ ಅಧ್ಯಕ್ಷತೆ ವಹಿಸಿ ಮಾತನಾಡಿ, ಪುಸ್ತಕಾವಲೋಕನ ನಮ್ಮ ಜೀವನಕ್ಕೆ ಬೇಕಾದ ಮಹತ್ವಪೂರ್ಣ ಅಂಶಗಳನ್ನು ತಿಳಿಹೇಳುವ, ಮಾರ್ಗದರ್ಶನ ನೀಡುವ ಕಾರ್ಯಕ್ರಮವಾಗಿದೆ. ಇದರ ಆಯೋಜನೆಗೆ ಅವಕಾಶ ದೊರೆತಿದ್ದು ಪುಣ್ಯವೆ ಸರಿ. ಕನ್ನಡದ ಸೇವೆ ಮಾಡುವುದು ಒಂದು ಭಾಗ್ಯ ಎಂದರು.

ಕವಿ ಸಿದ್ಧರಾಜ ಪೂಜಾರಿ ಮಾತನಾಡಿ, ಸಮಾಜಕ್ಕೆ ಕನ್ನಡಿ ಹಿಡಿಯುವ, ಹರಿತವಾದ ವಿಡಂಬನೆಯಿರುವ ಈ ವಚನ ಕಿರಣ ಮಹತ್ವದ ಕೃತಿ ಎಂದರು. ಎಂ.ಎಸ್.ಬದಾಮಿ, ಜಿ.ಎಸ್. ವಡಗಾಂವಿ, ಶಿವಾನಂದ ದಾಶಾಳ, ವೈ.ಬಿ. ಕೊರಡೂರ, ಡಾ. ಡಿ.ಎ. ಬಾಗಲಕೋಟ, ಡಾ.ರವಿ ಜಮಖಂಡಿ, ಕೃತಿಕಾರ ಶಿವಾನಂದ ಬಾಗಲಕೋಟಮಠ, ತಾಲೂಕು ಕಸಾಪ ಅಧ್ಯಕ್ಷ ಮ.ಕೃ. ಮೇಗಾಡಿ ಮಾತನಾಡಿದರು.

ಯಲ್ಲಟ್ಟಿ ಕೊಣ್ಣೂರ ವಿಜ್ಞಾನ ಪ.ಪೂ. ಕಾಲೇಜಿನ ಕನ್ನಡ ಉಪನ್ಯಾಸಕ ಡಾ. ಚಂದ್ರಕಾಂತ ಹೊಸೂರ, ಬಯಲಾಟ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಮಲ್ಲಪ್ಪ ಗಣಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ಜಯವಂತ ಕಾಡದೇವರ, ಇಂದುಧರ ಬೆಳಗಲಿ, ಶಂಕರ ಕೆಸರಗೊಪ್ಪ, ಬಸಯ್ಯ ವಸ್ತ್ರದ, ವಿಶ್ವಜ ಕಾಡದೇವರ, ಗೌರಿ ಮಿಳ್ಳಿ, ಈರಣ್ಣ ಗಣಮುಖಿ, ಮಲ್ಲಪ್ಪ ಕುಚನೂರ, ಗುರುರಾಜ ಖಾಸನೀಸ, ಸರ್ವಮಂಗಳ ಹಿರೇಮಠ, ಶಾಂತಾ ಸೋರಗಾಂವಿ, ಸ್ಮೀತಾ ಪಾವಟೆ, ಶಿವು ಯಾದವಾಡ, ಬಸವರಾಜ ಮೇಟಿ, ದಾನಪ್ಪ ಆಸಂಗಿ, ಮಲ್ಲಿಕಾರ್ಜುನ ಜವಳಗಿ ಇದ್ದರು.