ಜಿಲ್ಲೆ

ರಾಯರ ಆರಾಧನಾ ಮಹೋತ್ಸವ, ರಾಜಬೀದಿಗಳಲ್ಲಿ ಮಹಾರಥೋತ್ಸವ

Dharwada - Basavaraj Idli

ಹುಬ್ಬಳ್ಳಿ: ನಗರದ ವಿವಿಧ ಕಡೆಗಳ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಗುರುವಾರ ಉತ್ತರಾರಾಧನೆ ನಿಮಿತ್ತ ವೈವಿದ್ಯಮಯ ಕಾರ್ಯಕ್ರಮಗಳು ನಡೆದವು.

ಭವಾನಿನಗರ, ವಿದ್ಯಾನಗರ, ನವನಗರ, ತೊರವಿ ಗಲ್ಲಿ, ದೇಶಪಾಂಡೆನಗರ, ಸಂತೋಷನಗರ ಶಕ್ತಿ ಕಾಲನಿ, ಮುಂತಾದ ಕಡೆಗಳಲ್ಲಿ ರಾಯರ ಆರಾಧನೆ ಸಂಭ್ರಮದಿಂದ ನಡೆಯಿತು.

ಇಲ್ಲಿಯ ಭವಾನಿನಗರ ನಂಜನಗೂಡು ಶ್ರೀರಾಘವೇಂದ್ರಸ್ವಾಮಿಗಳ ಮಠದಲ್ಲಿ ಶ್ರೀರಾಘವೇಂದ್ರಸ್ವಾಮಿಗಳ 353ನೇ ಆರಾಧನಾ ಮಹೋತ್ಸವ ಅಂಗವಾಗಿ ಗುರುವಾರ ಮಹಾರಥೋತ್ಸವ ಸಂಭ್ರಮದಿಂದ ನಡೆಯಿತು.

ಉತ್ತರಾರಾಧನೆ ನಿಮಿತ್ತ ಬೆಳಗ್ಗೆಯಿಂದ ವಿವಿಧ ಧಾಮಿರ್ಕ ಕಾರ್ಯಕ್ರಮಗಳು ಜರುಗಿದವು. ಬೆಳಗ್ಗೆ 10.35ಕ್ಕೆ ಭವಾನಿನಗರದ ರಾಜಬೀದಿಯಲ್ಲಿ ಮಹಾರಥೋತ್ಸವವು ವಾದ್ಯಮೇಳ, ಭಕ್ತರ ಹಷೋರ್ದ್ಗಾರಗಳ ಮಧ್ಯೆ ನಡೆಯಿತು.

ಭಕ್ತರು ಗುಲಾಲು ಎರಚುತ್ತ ನೃತ್ಯ ಮಾಡುತ್ತ ಉತ್ಸವದಲ್ಲಿ ಪಾಲ್ಗೊಂಡರು. ಮಹಿಳೆಯರು ಸಹ ಉತ್ಸಾಹದಿಂದ ಭಾಗಿಯಾದರು.

ಆ. 23ರಂದು ಬೆಳಗ್ಗೆ 9ಕ್ಕೆ ಪವಮಾನ ಹೋಮ ಹಾಗೂ ಸಂಜೆ 7ಕ್ಕೆ ಸರ್ವಸಮರ್ಪಣೋತ್ಸವ ಜರುಗಲಿದೆ.