ಕೋಟ: ತೆಕ್ಕಟ್ಟೆಯ ಸೇವಾ ಸಂಗಮ ವಿದ್ಯಾ ಕೇಂದ್ರದಲ್ಲಿ ಗುರುಪೂರ್ಣಿಮೆ ಕಾರ್ಯಕ್ರಮ ನಡೆಯಿತು. ನಿವೃತ್ತ ಉಪನ್ಯಾಸಕಿ ಜಯಂತಿ ಜಿ. ಗುರುವಂದನೆ ಸ್ವೀಕರಿಸಿದರು.
ಶಿಕ್ಷಕಿ ನಾಗರತ್ನ ಎಂ. ಗುರುಪೂರ್ಣಿಮೆ ಕುರಿತು ಮಾತನಾಡಿದರು. ಶಾಲಾ ಅಧ್ಯಕ್ಷ ಸುರೇಶ್ ಬೆಟ್ಟಿನ್ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ಕಾರ್ಯದರ್ಶಿ ಕಮಲಾಕ್ಷ ಪೈ, ಮುಖ್ಯ ಶಿಕ್ಷಕಿ ಸಂಧ್ಯಾ ಭಟ್ ಉಪಸ್ಥಿತರಿದ್ದರು.
ಚಿನ್ಮಯಿ ಸ್ಮತಿ, ಧನ್ಯ ಜಿ, ದೀಕ್ಷಿತಾ ಅಮೃತ ಬಿಂದು ಅಮೃತವಚನ, ಸುಭಾಷಿತ, ಮಂಕುತಿಮ್ಮನ ಕಗ್ಗ ವಾಚಿಸಿದರು. ವಾಸುದೇವ ಸ್ವಾಗತಿಸಿದರು. ಸಾನಿಧ್ಯ ವಂದಿಸಿದರು. ಅನಿಕಾ ಕಾರ್ಯಕ್ರಮ ನಿರೂಪಿಸಿದರು.