ಗುರುಪುರ ವಜ್ರದೇಹಿ ಮಠಾಧೀಶ ಶ್ರೀ ರಾಜಶೇಖರಾನಂದ ಸ್ವಾಮೀಜಿ ಇತ್ತೀಚೆಗೆ ಕಲ್ಲುಗುಡ್ಡೆ ಪರಿಸರದ ದಲಿತ ಮನೆಗಳಿಗೆ ಭೇಟಿ ನೀಡಿದರು. ವಿಶ್ವ ಹಿಂದು ಪರಿಷತ್ತಿನ ಜಿಲ್ಲಾ ಕಾರ್ಯದರ್ಶಿ ನವೀನ್ ನೆರಿಯ, ಜಿಲ್ಲಾ ಧರ್ಮ ಪ್ರಸಾರ ಪ್ರಮುಖ್ ಮೂಲಚಂದ್ರ ಕಾಂಚನ ಮೊದಲಾದವರಿದ್ದರು. 
ಜಿಲ್ಲೆ

ದುಶ್ಚಟ ಬಿಟ್ಟು ಅಭಿವೃದ್ಧಿಗೆ ಶ್ರಮ: ಗುರುಪುರ ಶ್ರೀ ಆಶೀರ್ವಚನ

ಕಡಬ: ಹಿಂದುಗಳಲ್ಲಿ ಯಾವುದೇ ಭೇದ-ಭಾವ ಇಲ್ಲ. ನಾವೆಲ್ಲರೂ ಒಂದೇ ಆಗಿದ್ದೇವೆ. ದುಶ್ಚಟಕ್ಕೆ ಬಲಿಯಾದವರು ಆ ದುಶ್ಚಟಗಳನ್ನು ದೂರ ಮಾಡಬೇಕು. ತನ್ನ ಅಭಿವೃದ್ಧಿಗಾಗಿ ಶ್ರಮಿಸಬೇಕು ಮತ್ತು ಉತ್ತಮ ಶಿಕ್ಷಣ ಪಡೆಯಬೇಕು ಎಂದು ಗುರುಪುರ ವಜ್ರದೇಹಿ ಮಠಾಧೀಶ ಶ್ರೀ ರಾಜಶೇಖರಾನಂದ ಸ್ವಾಮೀಜಿ ಹೇಳಿದರು.

ವಿಶ್ವ ಹಿಂದು ಪರಿಷತ್ತಿನ ಧರ್ಮ ಪ್ರಸಾರ ವಿಭಾಗದ ವತಿಯಿಂದ ಇತ್ತೀಚೆಗೆ ನೂಜಿಬಾಳ್ತಿಲ ಗ್ರಾಮದ ಕಲ್ಲುಗುಡ್ಡೆ ಪರಿಸರದ ದಲಿತ ಕಾಲನಿಗಳ ಮನೆಗಳಿಗೆ ಭೇಟಿ ನೀಡಿ ಅವರು ಆಶೀರ್ವಚನ ನೀಡಿದರು.

ವಿಶ್ವ ಹಿಂದು ಪರಿಷತ್ತಿನ ಜಿಲ್ಲಾ ಕಾರ್ಯದರ್ಶಿ ನವೀನ್ ನೆರಿಯ, ಜಿಲ್ಲಾ ಧರ್ಮ ಪ್ರಸಾರ ಪ್ರಮುಖ್ ಮೂಲಚಂದ್ರ ಕಾಂಚನ, ಧರ್ಮ ಪ್ರಸಾರ ಸಹ ಪ್ರಮುಖರಾದ ಉಮೇಶ್ ಆಚಾರ್ಯ, ಕಡಬ ಪ್ರಖಂಡ ಉಪಾಧ್ಯಕ್ಷ ಸುದರ್ಶನ್ ಶಿರಾಡಿ, ಕಡಬ ಪ್ರಖಂಡ ಕಾರ್ಯದರ್ಶಿ ಜಯಂತ ಕಲ್ಲುಗುಡ್ಡೆ, ಕಡಬ ಪ್ರಖಂಡ ಬಜರಂಗದಳ ಸಹ ಸಂಯೋಜಕ ದಯಾನಂದ ಅಡ್ಡಹೊಳೆ ಮೊದಲಾದವರು ಉಪಸ್ಥಿತರಿದ್ದರು.