ಕೋಟ: ವಡ್ಡರ್ಸೆಯ ಶ್ರೀ ಮಹಾಲಿಂಗೇಶ್ವರ ಕಲಾರಂಗ ವಾರ್ಷಿಕ ಮಹಾಸಭೆಯಲ್ಲಿ ಅಧ್ಯಕ್ಷರು ಹಾಗೂ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ನಿಕಟಪೂರ್ವ ಅಧ್ಯಕ್ಷ ಸಚಿನ್ ಶೆಟ್ಟಿ ಯಾಳಕ್ಲು ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನೂತನ ಅಧ್ಯಕ್ಷರಾಗಿ ಗುರುಪ್ರಸಾದ್ ಐತಾಳ್ ಕಾವಡಿ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಉಪಾಧ್ಯಕ್ಷರಾಗಿ ಗಂಗಾಧರ ಶೆಟ್ಟಿ , ಕಾರ್ಯದರ್ಶಿಯಾಗಿ ಪದ್ಮನಾಭ ಆಚಾರ್ ಬನ್ನಾಡಿ, ಕೋಶಾಧಿಕಾರಿಯಾಗಿ ನಾಗರಾಜ ಆಚಾರ್ ನೀರ್ಕೊಡ್ಲು, ಜತೆ ಕಾರ್ಯದರ್ಶಿ ಗಣೇಶ್ ಐತಾಳ್, ಪ್ರಚಾರ ಸಮಿತಿಯ ಸದಸ್ಯರಾಗಿ ಮೋಹಿತ್, ಶ್ರೀನಿಧಿ, ಪ್ರಿಯರಂಜನ್ ಆಯ್ಕೆಯಾದರು. ಗೌರವಾಧ್ಯಕ್ಷರಾಗಿ ಕೊತ್ತಾಡಿ ಉದಯ್ ಕುಮಾರ್ ಶೆಟ್ಟಿ, ಗೌರವ ಸಲಹೆಗಾರರಾಗಿ ಲೋಕೇಶ್ ಭಟ್ ಬನ್ನಾಡಿ, ರುದ್ರಯ್ಯ ಆಚಾರ್ ನೀರ್ಕೊಡ್ಲು, ಸತೀಶ್ ಪೂಜಾರಿ ವಡ್ಡರ್ಸೆ, ಜಯಕರ ಶೆಟ್ಟಿ ವಡ್ಡರ್ಸೆ, ಮಹಾಬಲ ಯಾಳಕ್ಲು. ಜಗದೀಶ್ ಪೂಜಾರಿ ಅವರನ್ನು ಆಯ್ಕೆ ಮಾಡಲಾಯಿತು.
ಸಭೆಯಲ್ಲಿ ಕಲಾರಂಗದ ಸದಸ್ಯರಾದ ರಮೇಶ್ ಪೂಜಾರಿ, ವಿಘ್ನೇಶ್ ಶೆಟ್ಟಿ, ಶ್ರೀಕಾಂತ್ ಭಟ್ ಉಪ್ಲಾಡಿ, ಸತೀಶ್ ಶೆಟ್ಟಿ ವಡ್ಡರ್ಸೆ, ರಾಘವೇಂದ್ರ ದೇವಾಡಿಗ, ಕೊತ್ತಾಡಿ ಮಂಜುನಾಥ ಶೆಟ್ಟಿ, ಪ್ರಶಾಂತ್ ಶೆಟ್ಟಿ ಹಾಗೂ ಸತೀಶ್ ಉಪಸ್ಥಿತರಿದ್ದರು.