ಜಿಲ್ಲೆ

ಬ್ರಹ್ಮಾನಂದ ಸರಸ್ವತೀ ಶೀಗಳಿಗೆ ಗುರುಪಾದುಕಾ ಪೂಜೆ

ಕುಮಟಾ: ತಾಲೂಕಿನ ಕೋನಳ್ಳಿಯ ವನದುರ್ಗಾ ಮಂದಿರ ಪರಿಸರದಲ್ಲಿ ಮಂಗಳವಾರ ಕನ್ಯಾಡಿ ರಾಮಕ್ಷೇತ್ರದ ಮಹಾಮಂಡಲೇಶ್ವರ ಸದ್ಗುರು ಬ್ರಹ್ಮಾನಂದ ಸರಸ್ವತೀ ಸ್ವಾಮೀಜಿ ಅವರ 41ನೇ ದಿನದ ಚಾತುರ್ವಸ್ಯ ವ್ರತಾಚಾರಣೆಯಲ್ಲಿ ಇಡಗುಂಜಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಾಮಧಾರಿ ಸಮಾಜದವರು ಹಾಗೂ ಮಾಳಕೋಡದ ಶ್ರೀ ರಾಮ ಭಜನಾ ಮಂಡಳಿಯಿಂದ ಗುರುಪಾದುಕಾ ಪೂಜೆ ಸಮರ್ಪಿಸಲಾಯಿತು.

ಕಾರ್ಯಕ್ರಮದಲ್ಲಿ ಉದ್ಯಮಿ ವೆಂಕಟೇಶ ನಾಯ್ಕ, ಗೊರಟೆ, ಭಟ್ಕಳ, ಬಾಲಚಂದ್ರ ಮಾದೇವ ನಾಯ್ಕ ಮಾಳ್ಕೋಡ, ಜನಾರ್ದನ ವಾಮನ ನಾಯ್ಕ ಮಠದಕೇರಿ ರ್ಕ, ಪುಂಡಲೀಕ ಮಾದೇವ ನಾಯ್ಕ ಮಾಳ್ಕೋಡ, ಪಿಎಸ್​ಐ ನವೀನ ನಾಯ್ಕ, ಪಿಎಸ್​ಐ ಅನು ನಾಯ್ಕ, ಪಿಎಸ್​ಐ ಸಾವಿತ್ರಿ ಆನಂದ ನಾಯ್ಕ, ಭವಾನಿ ಶಂಕರ ಹೊನ್ನಾವರ, ಚಂದಾವರ ಮಾರುತಿದಾಸ, ಪಾಂಡುರಂಗ ನಾಯ್ಕ, ಕೃಷ್ಣ ಶಿವಪ್ಪ ನಾಯ್ಕ ಕೂಜಳ್ಳಿ, ಉದ್ಯಮಿ ರವೀಂದ್ರುಡು, ಮಾನಸ ರಮೇಶ ನಾಯ್ಕ ಕೆಳಗಿನಮನೆ ಕೂನಳ್ಳಿ, ಬಿ.ಕೃಷ್ಣಪ್ಪ ಗುಡಿಗಾರ, ಮುಕುಂದ ಗಣಪತಿ ನಾಯ್ಕ, ಕಲಭಾಗ ಗ್ರಾಮಸ್ಥ ನಾಮಧಾರಿ ಸಮಾಜದವರು ಇತರರು ಗುರುಗಳಿಗೆ ವಿವಿಧ ಸೇವೆ ಗೈದರು.

ಸೀಮೋಲ್ಲಂಘನ: ಕಳೆದ 41 ದಿನಗಳಿಂದ ಕೋನಳ್ಳಿಯಲ್ಲಿ ನಡೆದಿರುವ ಮಹಾಮಂಡಲೇಶ್ವರ ಸದ್ಗುರು ಬ್ರಹ್ಮಾನಂದ ಸರಸ್ವತೀ ಸ್ವಾಮೀಜಿಗಳ ಚಾತುರ್ವಸ್ಯ ವ್ರತ ಕಾರ್ಯಕ್ರಮದ ಸಮಾರೋಪ ಸಮಾರಂಭವು ಆ. 20ರಂದು ನೆರವೇರಲಿದೆ. ಅಂದು ಬೆಳಗ್ಗೆಯಿಂದಲೇ ವಿವಿಧ ಧಾರ್ವಿುಕ ಕಾರ್ಯಕ್ರಮಗಳೊಂದಿಗೆ ಆರಂಭವಾಗಿ 9 ಗಂಟೆಯ ಬಳಿಕ ಶ್ರೀಗಳ ಸೀಮೋಲ್ಲಂಘನ ಮೆರವಣಿಗೆ ಕೋನಳ್ಳಿಯಿಂದ ದಿವಗಿಯ ಅಘನಾಶಿನಿ ನದಿಯ ತಟದವರೆಗೆ ನಡೆಸಲು ನಿರ್ಧರಿಸಲಾಗಿದೆ.

ಮೆರವಣಿಗೆಯಲ್ಲಿ ಶ್ರೀಗಳು ವಿಶೇಷ ಪುಷ್ಪಾಲಂಕೃತ ರಥದ ಮೂಲಕ, ಬೈಕ್ ಹಾಗೂ ಕಾರುಗಳ ಬೃಹತ್ ಮೆರವಣಿಗೆಯಲ್ಲಿ ಆಗಮಿಸಲಿದ್ದಾರೆ. ಬಳಿಕ ಶ್ರೀಗಳ ಸೀಮೋಲ್ಲಂಘನದೊಂದಿಗೆ ಚಾತುರ್ವಸ್ಯ ವಿಜಯೋತ್ಸವವನ್ನು ಆಚರಿಸಲಾಗುವುದು ಎಂದು ಚಾತುರ್ವಸ್ಯ ಸಮಿತಿ ಹಾಗೂ ಸದ್ಭಕ್ತರು ತಿಳಿಸಿದ್ದಾರೆ.