ಗುರುಪಾದೇಶ್ವರರ 972ನೇ ಜಯಂತಿ ನಿಮಿತ್ತ ರಾಯಚೂರಿನ ಕಿಲ್ಲೆ ಬೃಹನ್ಮಠದಿಂದ ಕೋಳಂಕಿವರೆಗೆ ಭಾನುವಾರ ಸದ್ಭಾವನಾ ಪಾದಯಾತ್ರೆ ನಡೆಸಲಾಯಿತು. ಕಿಲ್ಲೆ ಬೃಹನ್ಮಠದ ಶಾಂತಮಲ್ಲ ಶಿವಾಚಾರ್ಯ ಸ್ವಾಮೀಜಿ, ಗಂಗಾಧರ ಶಿವಾಚಾರ್ಯ ಸ್ವಾಮೀಜಿ, ನಗರಸಭೆ ಸದಸ್ಯ ಬಸವರಾಜ ಪಾಟೀಲ್ ದರೂರು, ಮುಖಂಡರಾದ ಕೇಶವರೆಡ್ಡಿ, ಎನ್.ಶಿವಶಂಕರ,ಸಿದ್ಧನಗೌಡ, ಜಿ.ಶಿವಮೂರ್ತಿ, ವೀರಯ್ಯಸ್ವಾಮಿ ಆಶಾಪುರ, ಬಸವರಾಜ ಸ್ವಾಮಿ ಇದ್ದರು. 
ಜಿಲ್ಲೆ

ಬೇಡಿದ ವರ ನೀಡುವ ಗುರುಪಾದೇಶ್ವರ

ರಾಚಯ್ಯ ಸ್ವಾಮಿ

ರಾಯಚೂರು: ಕೋಳಂಕಿ ಗುರುಪಾದೇಶ್ವರರು ಭಕ್ತರು ಬೇಡಿದ ವರವನ್ನು ನೀಡುವ ಗುರುಗಳಾಗಿದ್ದು, ಬರಗಾಲದ ಸಂದರ್ಭದಲ್ಲಿ ತಪಸ್ಸಿನ ಮೂಲಕ ಮಳೆ ತರಿಸಿ ಮಹಾನ್ ತಪಸ್ವಿಗಳಾಗಿದ್ದರು ಎಂದು ಕಿಲ್ಲೆ ಬೃಹನ್ಮಠದ ಶಾಂತಮಲ್ಲ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ನಗರದ ಕಿಲ್ಲೆ ಬೃಹನ್ಮಠದಿಂದ ಕೋಳಂಕಿವರೆಗೆ ಗುರುಪಾದೇಶ್ವರರ 972ನೇ ಜಯಂತಿ ನಿಮಿತ್ತ ಭಾನುವಾರ ಹಮ್ಮಿಕೊಂಡಿದ್ದ ಸದ್ಭಾವನಾ ಪಾದಯಾತ್ರೆಗೆ ಚಾಲನೆ ನೀಡಿ ಆಶೀರ್ವಚನ ನೀಡಿ, ಮಳೆ ತರಿಸುವ ಮೂಲಕ ಜನರಿಗೆ ಕೃಪೆ ತಗೋರಿಸಿದ ಗುರುಪಾದೇಶ್ವರರಿಗೆ ಸೇವೆ ಮಾಡುವ ನಿಟ್ಟಿನಲ್ಲಿ ಪ್ರತಿವರ್ಷ ಪಾದಯಾತ್ರೆ ನಡೆಸಲಾಗುತ್ತಿದೆ ಎಂದರು.
ಶ್ರೀಮಠದಿಂದ ಆರಂಭವಾದ ಸದ್ಭಾವನಾ ಪಾದಯತ್ರೆ ನಗರದ ಪ್ರಮುಖ ಬೀದಿಗಳ ಮೂಲಕ ಕೋಳಂಕಿಗೆ ತೆರಳಿ ಗುರುಪಾದೇಶ್ವರರ ಗದ್ದುಗೆಗೆ ವಿಶೇಷ ಪೂಜೆ ನಡೆಸಲಾಯಿತು. ಪಾದಯಾತ್ರೆಯಲ್ಲಿ ತಂಡಿಕೇರಿ ರಂಭಾಪುರ ಶಾಖಾಮಠದ ಗಂಗಾಧರ ಶಿವಾಚಾರ್ಯ ಸ್ವಾಮೀಜಿ, ಪಾರ್ವತಿ ಪರಮೇಶ್ವರ ದೇವಸ್ಥಾನದ ಧರ್ಮದರ್ಶಿ ಕ್ಷೀರಲಿಂಗೇಶ್ವರ ಶರಣರು, ನಗರಸಭೆ ಸದಸ್ಯ ಬಸವರಾಜ ಪಾಟೀಲ್ ದರೂರು, ಮುಖಂಡರಾದ ಕೆ.ಶಾಂತಪ್ಪ, ಕೇಶವರೆಡ್ಡಿ, ಎನ್.ಶಿವಶಂಕರ, ಪವನಕುಮಾರ, ಸಿದ್ಧನಗೌಡ, ವೀರಯ್ಯಸ್ವಾಮಿ ಆಶಾಪುರ, ಬಸವರಾಜ ಸ್ವಾಮಿ ಪಾಲ್ಗೊಂಡಿದ್ದರು.