ಜಿಲ್ಲೆ

ಸಾಮಾಜಿಕ ಅಂತರ ಕಟ್ಟುನಿಟ್ಟಾಗಿ ಪಾಲಿಸಿ

ಗುರುಮಠಕಲ್: ವೈರಸ್ ನಿಯಂತ್ರಣಕ್ಕೆ ಸ್ವಚ್ಛತೆ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಅಗತ್ಯವಾಗಿದ್ದು, ಈ ನಿಟ್ಟಿನಲ್ಲಿ ಜನರಲ್ಲಿ ಜಾಗೃತಿ ಮೂಡಿಸುವುದು ಅಗತ್ಯವಾಗಿದೆ ಎಂದು ತಹಸೀಲ್ದಾರ್ ಸಂಗಮೇಶ ಜಿಡಗೆ ಸೂಚಿಸಿದ್ದಾರೆ.

ತಹಸಿಲ್ ಕಚೇರಿಯಲ್ಲಿ ಕರೆದಿದ್ದ ಟಾಸ್ಕ್ ಫೋಸರ್್ ಸಭೆಯಲ್ಲಿ ಮಾತನಾಡಿದ ಅವರು, ತರಕಾರಿ ಮಾರಾಟಕ್ಕಾಗಿ ಪಟ್ಟಣದ ಗಾಂಧಿ ಮೈದಾನದಲ್ಲಿ 6 ಹಾಗೂ ಬಸ್ ನಿಲ್ದಾಣದ ಬಳಿಯ ಪದವಿಪೂರ್ವ ಕಾಲೇಜು. ಆವರಣದಲ್ಲಿ 6 ಅಂಗಡಿಗಳ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.

ಪಟ್ಟಣದ ಸರ್ಕಾರಿ ಡಿಗ್ರಿ ಕಾಲೇಜಿನ ಕಟ್ಟಡವನ್ನು ಆರೋಗ್ಯ ತಪಾಸಣೆ, ವೈದ್ಯಕೀಯ ಸೇವೆಗಳಿಗಾಗಿ ಕಾಯ್ದಿರಿಸಿದ್ದು, ದೂರದ ನಗರಗಳಿಂದ ಬಂದವರು 15 ದಿನಗಳ ಕಾಲ ನಿಗಾ ಅವಧಿಯನ್ನು ತಪ್ಪದೆ ಪಾಲಿಸುವಂತೆ ಸೂಚಿಸಬೇಕು. ಸಿಪಿಐ ದೇವೀಂದ್ರಪ್ಪ ಧೂಳಖೇಡ, ಡಾ. ಭಾಗರೆಡ್ಡಿ, ಎಂ.ಎಂ.ಪಟೇಲ್, ಪುರಸಭೆ ವ್ಯವಸ್ಥಾಪಕ ಮಲ್ಲಿಕಾರ್ಜುನ, ಪ್ರಶಾಂತ ಇತರರಿದ್ದರು.