ಹುಬ್ಬಳ್ಳಿ: ಇಲ್ಲಿಯ ಮಹಾತಾಯಿ ಟ್ರಸ್ಟ್‌ನ ಗುರುಕುಲದ ಪ್ರಥಮ ವಾಷಿರ್ಕೋತ್ಸವ ಹಾಗೂ ಗುರುವಂದನೆ ಕಾರ್ಯಕ್ರಮ ಈಚೆಗೆ ಆಯೋಜಿಸಲಾಗಿತ್ತು. ಎಸ್ಎಸ್ಎಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದು ಸಾಧನೆಗೈದ ವಿದ್ಯಾಥಿರ್ಗಳಿಗೆ ಸನ್ಮಾನಿಸಲಾಯಿತು.
ಸೇವಾ ಮನೋಭಾವನೆ ಪ್ರಮುಖ ಉದ್ದೇಶವಾಗಿಟ್ಟುಕೊಂಡು ಸ್ಥಾಪಿತವಾಗಿರುವ ಈ ಟ್ರಸ್ಟ್ ಬಡ ವಿದ್ಯಾಥಿರ್ಗಳ ಅಧ್ಯಯನಕ್ಕೆ ಹಣದ ಸಹಾಯ, ಉನ್ನತ ಶಿಕ್ಷಣಕ್ಕೆ ಮಾರ್ಗದರ್ಶನ, ಸ್ಪರ್ಧಾತ್ಮಕ ಪರೀಕ್ಷೆಗಳ ಮಾಹಿತಿ, ಕಲೆಗಳನ್ನು ಪ್ರೋತ್ಸಾಹಿಸುವ ಕೆಲಸ ಮಾಡುತ್ತಿದೆ.
ಇದೀಗ ವರ್ಷ ಪೂರೈಸಿರುವ ಸಂಸ್ಥೆಯಲ್ಲಿ ಗುರುವಂದನೆ ಏರ್ಪಡಿಸಲಾಗಿತ್ತು. ವಿವೇಕಾನಂದ ಆಶ್ರಮದ ಶ್ರೀ ರಘುವೀರಾನಂದ ಜೀ ಸಾನ್ನಿಧ್ಯ ವಹಿಸಿದ್ದರು.
ಧಾರವಾಡ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದಶಿರ್ ಕೆ.ಎಸ್. ಕೌಜಲಗಿ ಅಧ್ಯಕ್ಷತೆ ವಹಿಸಿದ್ದರು.
ಸಂದೀಪ ಬೂದಿಹಾಳ, ಮಲ್ಲಿಕಾರ್ಜುನ ರಡ್ಡೇರ, ಸಂಸ್ಥಾಪಕ ಮಲ್ಲಿಕಾರ್ಜುನ ಪಾಟೀಲ, ಶ್ವೇತಾ ಪಾಟೀಲ ಭಾಗವಹಿಸಿದ್ದರು. ಕಲ್ಮೇಶ ಕೋರಿ ಕಾರ್ಯಕ್ರಮ ನಿರೂಪಿಸಿದರು. ಗಂಗಾಧರ ಹುಬ್ಬಳ್ಳಿ ಸ್ವಾಗತಿಸಿದರು. ಮಲ್ಲನಗೌಡ ಪಾಟೀಲ ವಂದಿಸಿದರು.