ಜಿಲ್ಲೆ

ಮಹಿಳೆಯರ ಸಬಲೀಕರಣಕ್ಕಾಗಿ ಹಲವು ಯೋಜನೆ

ಶಶಿಧರ ಎಲ್

ಗುರುಗುಂಟಾ: ಜ್ಞಾನವಿಕಾಸ ಕೇಂದ್ರ ಹೇಮಾವತಿ ಹೆಗ್ಗಡೆ ಅವರ ಕನಸಿನ ಕೂಸು ಆಗಿದ್ದು, ಬಡವ-ಬಲ್ಲಿದ, ಜಾತಿ-ಮತಗಳ ಭೇದಗಳಿಲ್ಲದೆ ಸೇವೆ ಸಲ್ಲಿಸುತ್ತಿದೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಯೋಜನಾಧಿಕಾರಿ ಎಂ.ರಾಜೇಶ್ ಹೇಳಿದರು.

ಗ್ರಾಮದ ವಿಪ್ರ ಸಮಾಜದ ಕಲ್ಯಾಣ ಮಂಟಪದಲ್ಲಿ ಕೇಂದ್ರದ ವಾರ್ಷಿಕೋತ್ಸವ ಉದ್ಘಾಟಿಸಿ ಮಂಗಳವಾರ ಸಂಜೆ ಮಾತನಾಡಿದರು.

ಹೇಮಾವತಿ ಹೆಗ್ಗಡೆ ಅವರು ಮಹಿಳೆಯರ ಸಬಲೀಕರಣಕ್ಕಾಗಿ ವಿವಿಧ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿದ್ದು, ಅವುಗಳ ಸದುಪಯೋಗ ಪಡೆದುಕೊಳ್ಳಬೇಕು.

ಸಂಸ್ಥೆ ಹೆಮ್ಮರವಾಗಿ ಬೆಳೆದು ಲಕ್ಷಾಂತರ ಮಹಿಳೆಯರು ಜ್ಞಾನವಿಕಾಸ ಹೊಂದಿ ಸ್ವಾವಲಂಬಿ ಜೀವನ ನಡೆಸುತ್ತಿದ್ದಾರೆ ಎಂದು ತಿಳಿಸಿದರು.

ರಾಜಗುರು ಶಿಕ್ಷಣ ಸಂಸ್ಥೆ ಶಾಲೆಯ ಮುಖ್ಯಶಿಕ್ಷಕ ಮಲ್ಲಿಕಾರ್ಜುನ ಕಳಸದಗುಡಿ ಮಹಿಳಾ ಸಬಲೀಕರಣದ ಕುರಿತು ವಿಷಯ ಮಂಡಿಸಿದರು. ಸಂಸ್ಥೆಯ ಸದಸ್ಯೆಯರಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಿ ಬಹುಮಾನ ವಿತರಿಸಲಾಯಿತು.

ಒಕ್ಕೂಟದ ಅಧ್ಯಕ್ಷರಾದ ಪ್ರೇಮಾಅಕ್ಕನಗೌಡರ್, ಸವಿತಾ, ಅನ್ನಪೂರ್ಣ ಪಟ್ಟಣಶೆಟ್ಟಿ, ಸೇವಾಪ್ರತಿನಿಧಿಗಳಾದ ಜ್ಯೋತಿ, ದೇವಮ್ಮ, ಬಸ್ಸಮ್ಮ ಇದ್ದರು.