ಗುರುಗುಂಟ ಮೌಂಟ್ ಕಾರ್ಮೆಲ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಗುರುವಾರ ಹಮ್ಮಿಕೊಂಡಿದ್ದ 2023-24ನೇ ಸಾಲಿನ ಗುರುಗುಂಟ, ಪೈದೊಡ್ಡಿ ವಲಯಮಟ್ಟದ ಹಿರಿಯ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಚನ್ನಬಸವಮೇಟಿ, ನಂದೀಶನಾಯಕ, ಗ್ರಾಪಂ ಸದಸ್ಯರಾದ ಬಾಬುಸಾಬ್ ದಿಡ್ಡಿಮನಿ, ಎಸ್‌ಡಿಎಂಸಿ ಅಧ್ಯಕ್ಷ ವಿಜಯಕುಮಾರ್ ನಾಯಕ ಇತರರಿದ್ದರು. 
ಜಿಲ್ಲೆ

ಆತ್ಮವಿಶ್ವಾಸದಿಂದ ಬದುಕಲ್ಲಿ ಯಶಸ್ಸು ಸಾಧ್ಯ, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಚನ್ನಬಸವಮೇಟಿ ಹೇಳಿಕೆ

ಕುರುವತ್ತಿ ಶ್ರೀಕಾಂತಪ್ಪ

ಗುರುಗುಂಟ: ಮಕ್ಕಳಲ್ಲಿ ಆತ್ಮವಿಶ್ವಾಸವೆಂಬ ಬೀಜ ಮೊಳಕೆ ಒಡೆದಾಗ ಮಾತ್ರ ಕ್ಲಿಷ್ಟ ಸನ್ನಿವೇಶಗಳನ್ನು ಎದುರಿಸಿ ದೃಢಸಂಕಲ್ಪದೊಂದಿಗೆ ಬದುಕಲ್ಲಿ ಸಫಲರಾಗುತ್ತಾರೆ ಎಂದು ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಚನ್ನಬಸವಮೇಟಿ ಹೇಳಿದರು.

ಸ್ಥಳೀಯ ಮೌಂಟ್ ಕಾರ್ಮೆಲ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ 2023-24ನೇ ಸಾಲಿನ ಗುರುಗುಂಟ ಹಾಗೂ ಪೈದೊಡ್ಡಿ ವಲಯಮಟ್ಟದ ಹಿರಿಯ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟದಲ್ಲಿ ಧ್ವಜಾರೋಹಣ ನೆರವೇರಿಸಿ ಗುರುವಾರ ಮಾತನಾಡಿದರು.

ಸಕಾರಾತ್ಮಕ ಭಾವನೊಂದಿಗೆ ಕ್ರೀಡೆಯಲ್ಲಿ ಮುನ್ನುಗ್ಗಿ ತಾಲೂಕು, ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಹೆಸರು ಮಾಡುವಂತೆ ಸಲಹೆ ನೀಡಿದರು. ತಾ.ಪ್ರಾ.ಶಿ. ಸಂಘದ ಅಧ್ಯಕ್ಷ ಬಸವರಾಜ ಕರಡಿ, ಕಾರ್ಯಕ್ರಮ ಉದ್ಘಾಟಿಸಿದರು. ಶಾಲೆಯ ಮುಖ್ಯಶಿಕ್ಷಕ ರಾಬರ್ಟ್ ಪೌಲ್ ಪೂಸಾಮಿ ಅಧ್ಯಕ್ಷತೆ ವಹಿಸಿದ್ದರು.

ಗ್ರಾಪಂ ಸದಸ್ಯರಾದ ಬಾಬುಸಾಬ್ ದಿಡ್ಡಿಮನಿ, ಎಸ್‌ಡಿಎಂಸಿ ಅಧ್ಯಕ್ಷ ವಿಜಯಕುಮಾರನಾಯಕ, ಚಂದ್ರಶೇಖರನಾಯಕ ದಿವಾಣ್, ವಿಶ್ರಾಂತ ದೈಹಿಕ ಶಿಕ್ಷಣ ಪರಿವೀಕ್ಷಕ ಖಾಜಾಹುಸೇನ್, ಹಟ್ಟಿವಲಯ ಬಿಆರ್‌ಪಿ ಮೊಹಮ್ಮದ್ ಮುಸ್ತಾಫ್, ಪ್ರಮುಖರಾದ ನಂದೀಶನಾಯಕ, ಜಿತೇಂದ್ರ ಕುಮಾರ, ಗೌಡೂರು ಸಿಆರ್‌ಸಿ ರಜಾಕ್ ಮಲ್ಲೇವಾಲೆ, ಗುಂತಗೋಳ ಸಿಆರ್‌ಪಿ ನಾಗೇಶ್, ಎಂಎಚ್‌ಪಿ ಎಸ್ ಮುಖ್ಯ ಶಿಕ್ಷಕ ನಾಗೇರ್ಶ ಇತರರಿದ್ದರು.

ಮೇದಿನಾಪುರು ಶಾಲೆಯ ದೈಹಿಕ ಶಿಕ್ಷಕ ಶರಣಪ್ಪ, ಮಕ್ಕಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಶಿಕ್ಷಕ ಆಂಥೋನಿರಾಯ್ ಪ್ರಾರ್ಥಿಸಿದರು. ಶಿಕ್ಷಕ ಕರುಣಾಕರ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಕ್ರೀಡೆಯಲ್ಲಿ ಎರಡು ಸಿಆರ್‌ಸಿಯ 11 ಶಾಲೆಯ ಮಕ್ಕಳು ಪಾಲ್ಗೊಂಡಿದ್ದರು.