ಜಿಲ್ಲೆ

ಗುರುಗಳ ಆಶಯದಂತೆ ದುರ್ಬಲ ವರ್ಗದವರ ಹಿತ ಕಾಯುವ ಸಂಸ್ಥೆ : ಮಾಜಿ ಶಾಸಕ ರಮಾನಾಥ ರೈ ಶ್ಲಾಘನೆ

ಸೌಮ್ಯ ಆರ್

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ

ಬ್ರಹ್ಮ ಶ್ರೀ ನಾರಾಯಣ ಗುರುಗಳ ಆಶಯದಂತೆ ಸಾಮಾಜಿಕ ನ್ಯಾಯವಂಚಿತ ದುರ್ಬಲ ವರ್ಗದ ಬಡಜನತೆಯ ಹಿತ ಕಾಯುವ ನಿಟ್ಟಿನಲ್ಲಿ ಸ್ಥಾಪಿತವಾದ ಶ್ರೀ ಗುರುದೇವ ಸಹಕಾರ ಸಂಘ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಹೇಳಿದರು.

ವಾಮದಪದವಿನ ಕಾಲೇಜು ರಸ್ತೆಯ ಕಳಸಡ್ಕ ಕಾಂಪ್ಲೆಕ್ಸ್‌ನಲ್ಲಿ ಗುರುವಾರ ಬೆಳ್ತಂಗಡಿಯಲ್ಲಿ ಕೇಂದ್ರ ಕಚೇರಿ ಹೊಂದಿರುವ ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರ ಸಂಘದ 24ನೇ ವಾಮದಪದವು ಶಾಖೆ ಉದ್ಘಾಟನೆಯ ಸಭಾಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ವಾಮದಪದವು ವಲಯ ಬಂಟರ ಸಂಘದ ಅಧ್ಯಕ್ಷ ವಸಂತ ಶೆಟ್ಟಿ ಕೇದಗೆ ಶಾಖೆಯನ್ನು ಉದ್ಘಾಟಿಸಿದರು. ಶಾಸಕ ರಾಜೇಶ್ ನಾಕ್ ಶುಭಹಾರೈಸಿದರು. ಸಂಘದ ಅಧ್ಯಕ್ಷ ಎನ್. ಪದ್ಮನಾಭ ಮಾಣಿಂಜ ಅಧ್ಯಕ್ಷತೆ ವಹಿಸಿದ್ದರು.

ಸಂಘದ ವಿಶೇಷಾಧಿಕಾರಿ ಎಂ.ಮೋನಪ್ಪ ಪೂಜಾರಿ ಕಂಡತ್ಯಾರು ಪ್ರಾಸ್ತಾವಿಕವಾಗಿ ಮಾತನಾಡಿ, 2008ರಲ್ಲಿ ಕೆ.ಜಿ ಬಂಗೇರ ಸ್ಥಾಪಕ ಅಧ್ಯಕ್ಷರಾಗಿದ್ದುಕೊಂಡು ಸಂಘ ಬೆಳ್ತಂಗಡಿಯಲ್ಲಿ ಆರಂಭವಾಯಿತು. ದಕ್ಷಿಣ ಕನ್ನಡ, ಉಡುಪಿ ಹಾಗೂ ಮೈಸೂರು ಪ್ರಾಂತಗಳಲ್ಲಿ ಶಾಖೆಗಳಿವೆ. ಸತತ ಶೇ.15 ಡಿವಿಡೆಂಡ್ ನೀಡುತ್ತಿದ್ದೇವೆ. ಶೀಘ್ರ ಇನ್ನೆರಡು ಶಾಖೆಗಳು ಆರಂಭಗೊಳ್ಳಲಿವೆ ಎಂದರು.

ಬಂಟ್ವಾಳ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಸಂಜೀವ ಪೂಜಾರಿ ಗುರುಕೃಪಾ ಭದ್ರತಾ ಕೋಶ, ಚೆನ್ನೈತ್ತೋಡಿ ಗ್ರಾಪಂ ಅಧ್ಯಕ್ಷೆ ವನಿತಾ ಗಣಕ ಯಂತ್ರ ಉದ್ಘಾಟಿಸಿದರು. ವಾಮದಪದವು ಬ್ರಹ್ಮಶ್ರೀ ನಾರಾಯಣ ಗುರು ಸಂಘದ ಅಧ್ಯಕ್ಷ ಚೇತನ್ ಕುಮಾರ್ ಕುದ್ಕಂದೋಡಿ ನಿರಖು ಠೇವಣಿ ಸರ್ಟಿಫಿಕೆಟ್ ವಿತರಿಸಿದರು. ಬಂಟ್ವಾಳ ಕೆಥೋಲಿಕ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಅಧ್ಯಕ್ಷ ಜೀವನ್ ಲಾಯ್ಡ ಪಿಂಟೊ ಉಳಿತಾಯ ಪುಸ್ತಕ ಖಾತೆ ವಿತರಿಸಿದರು.

ವಾಮದಪದವು ಬಿಲ್ಲವ ಮಹಿಳಾ ಸಮಾಜ ಸೇವಾ ಸಂಘದ ಅಧ್ಯಕ್ಷೆ ಭಾರತಿ ರಾಜೇಂದ್ರ ಪೂಜಾರಿ, ಕಟ್ಟಡ ಮಾಲಕ ಯೋಗೀಶ್ ಕಳಸಡ್ಕ, ವಾಮದಪದವು ಉದ್ಯಮಿ ಅನಂತ ಪೈ, ಪಿಲಾತಬೆಟ್ಟು ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ಎಂ.ತುಂಗಪ್ಪ ಬಂಗೇರ, ಇರ್ವತ್ತೂರು ಶ್ರೀ ಶಾರದೋತ್ಸವ ಸಮಿತಿ ಅಧ್ಯಕ್ಷ ಡಾ.ರಾಮಕೃಷ್ಣ ಎಸ್., ಸಂಘದ ನಿರ್ದೇಶಕರಾದ ಸುಜಿತಾ ವಿ.ಬಂಗೇರ, ಕೆ.ಪಿ.ದಿವಾಕರ, ಧರ್ಣಪ್ಪ ಪೂಜಾರಿ, ಡಾ. ರಾಜಾರಾಮ ಕೆ.ಬಿ., ರಕ್ಷಿತ್ ಶಿವರಾಂ, ಜಗದೀಶ್ಚಂದ್ರ ಡಿ.ಕೆ., ತನುಜಾ ಶೇಖರ್, ಆನಂದ ಪೂಜಾರಿ, ಚಿದಾನಂದ ಪೂಜಾರಿ, ಚಂದ್ರಶೇಖರ್, ಗಂಗಾಧರ ಮಿತ್ತಮಾರ್, ಜಯವಿಕ್ರಮ ಕಲ್ಲಾಪು, ವಿವಿಧ ಶಾಖೆಗಳ ಪ್ರಬಂಧಕರು, ಸಿಬಂದಿ ವರ್ಗ ಉಪಸ್ಥಿತರಿದ್ದರು.

ಯೋಗೀಶ್ ಕಲಸಡ್ಕ ಹಾಗೂ ಚೇತನ್ ಅವರನ್ನು ಸಮ್ಮಾನಿಸಲಾಯಿತು. ಸಂಘದ ಉಪಾಧ್ಯಕ್ಷ ಭಗೀರಥ ಜಿ. ಸ್ವಾಗತಿಸಿದರು. ನಿರ್ದೇಶಕ ಧರಣೇಂದ್ರ ಕುಮಾರ್ ವಂದಿಸಿದರು. ಮುಖ್ಯಕಾರ್ಯನಿರ್ವಹಣಾಧಿಕಾರಿ ಅಶ್ವತ್ಥ ಕುಮಾರ್ ಮತ್ತು ಶಿವಪ್ರಕಾಶ್ ನಿರೂಪಿಸಿದರು.

ಗ್ರಾಮೀಣ ಪ್ರದೇಶದಲ್ಲಿ ಸಹಕಾರಿ ಸಂಘಗಳು ರಾಷ್ಟ್ರೀಕೃತ ಬ್ಯಾಂಕ್‌ಗಳಿಗೆ ಸಮಾನವಾಗಿ ಕಾರ್ಯ ನಿರ್ವಹಿಸುತ್ತಿದ್ದು, ಜನರ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿವೆ. ರಾಜೇಶ್ ನೈಾಕ್ ಉಳಿಪ್ಪಾಡಿಗುತ್ತು ಶಾಸಕ ಗ್ರಾಮೀಣ ಪ್ರದೇಶದಲ್ಲಿ ಹುಟ್ಟಿದ ಸಂಸ್ಥೆ ಗ್ರಾಮೀಣ ಪ್ರದೇಶದ ಜನರ ಅಭಿವೃದ್ಧಿಗೆ ಆದ್ಯತೆ ನೀಡಿದೆ. ಸಂಘ ಪ್ರಾಮಾಣಿಕ, ಪಾರದರ್ಶಕವಾಗಿ ಕಾರ್ಯನಿರ್ವಹಿಸುತ್ತಿದೆ. ಎನ್. ಪದ್ಮನಾಭ ಮಾಣಿಂಜ, ಸಂಘದ ಅಧ್ಯಕ್ಷ https://www.vijayavani.net/by-election-voting-is-peaceful https://www.vijayavani.net/meeting-9