ಜಿಲ್ಲೆ

ಗುರುದೇವ ಕಾಲೇಜಿನಲ್ಲಿ ಅಭಿಯಾನ

ಧಾರವಾಡ : ಧಾರವಾಡ ಭಾರತಿ ನಗರದಲ್ಲಿರುವ ಗುರುದೇವ ಪದವಿಪೂರ್ವ ವಿಜ್ಞಾನ ಮಹಾವಿದ್ಯಾಲಯದಲ್ಲಿ ‘ಮಾದಕ ವಸ್ತುಗಳೆಂಬ ರಾಕ್ಷಸರಿಂದ ಮಕ್ಕಳನ್ನು /ಯುವ ಜನಾಂಗವನ್ನು ರಕ್ಷಿಸಿ‘ ಹಾಗೂ ‘ನಮ್ಮ ಮಕ್ಕಳ ರಕ್ಷಣೆ ನಮ್ಮ ಜವಾಬ್ದಾರಿ‘ ಎಂಬ ವಿಶೇಷ ಅಭಿಯಾನವನ್ನು ಗುರುವಾರ ನಡೆಸಲಾಯಿತು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಧಾರವಾಡ ಜಿಲ್ಲಾ ವಕೀಲರ ಸಂಘ, ಜಿಲ್ಲಾಡಳಿತ, ಪೊಲೀಸ್ ಇಲಾಖೆ, ಅಭಿಯೋಗ, ಸರ್ಕಾರಿ ವ್ಯಾಜ್ಯಗಳ ಇಲಾಖೆ, ಶಾಲಾ ಶಿಕ್ಷಣ ಇಲಾಖೆ ಸಹಯೋಗದೊಂದಿಗೆ ಈ ಅಭಿಯಾನ ಏರ್ಪಡಿಸಲಾಗಿತ್ತು.

ಅತಿಥಿಯಾಗಿದ್ದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಪ್ಯಾನಲ್ ವಕೀಲೆ ಶ್ರೀದೇವಿ ಕೊಲ್ಹಾರ ಮಾತನಾಡಿ, ಕಾನೂನು ಸೇವೆಗಳನ್ನು ಹಾಗೂ ಪೋಕೊ್ಸೕ ಕಾಯ್ದೆಯಡಿ ನಡೆಯುವ ಕೃತ್ಯಗಳು, ಅದಕ್ಕೆ ಸಂಬಂಧಿಸಿದ ಶಿಕ್ಷೆಗಳ ಬಗ್ಗೆ ಮಾತನಾಡಿದರು.

ಅತಿಥಿ ಪ್ರಭಾವತಿ ದೇಸಾಯಿ ಮಾತನಾಡಿ, ವಿದ್ಯಾರ್ಥಿಗಳು ಮಾದಕ ವ್ಯಸನಿಗಳಿಂದ ದೂರ ಇರಬೇಕು ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಮದನ್ ಇಜಿ ಹಾಗೂ ಉಪ ಪ್ರಾಚಾರ್ಯ ಮಹಾಲಿಂಗ ಕಮತಗಿ ಮಾತನಾಡಿದರು. ಉಪನ್ಯಾಸಕ ಕುಮಾರ ಪೂಜಾರ ಸ್ವಾಗತಿಸಿ, ವಂದಿಸಿದರು.