ಕವಲೂರು ಗ್ರಾಮದಲ್ಲಿ ಗುರು ಬಸವೇಶ್ವರ ಭಜನಾ ಮಂಗಲ ಕಾರ್ಯಕ್ರಮದ ಅಂಗವಾಗಿ ಮೆರವಣಿಗೆ ನಡೆಯಿತು. ಪ್ರಮುಖರಾದ ಮುತ್ತಣ್ಣ, ನಾಗರಾಜ, ಹನುಮಂತ, ಅಜ್ಜಪ್ಪ, ವೀರಣ್ಣ, ನಾಗಪ್ಪ, ನಿಂಗಪ್ಪ ಇತರರಿದ್ದರು. 
ಜಿಲ್ಲೆ

ಗುರುಬಸವೇಶ್ವರರ ಮೂರ್ತಿ ಮೆರವಣಿಗೆ ಅದ್ದೂರಿ

ಕವಲೂರು: ಗ್ರಾಮದಲ್ಲಿ ಗುರು ಬಸವೇಶ್ವರ ಭಜನಾ ಸಂಘದಿಂದ ಶ್ರಾವಣ ಮಾಸಾದ್ಯಂತ ನಡೆದ ಭಜನಾ ಮಂಗಲ ಕಾರ್ಯಕ್ರಮ ಸೋಮವಾರ ಅದ್ದೂರಿಯಿಂದ ಜರುಗಿತು. ಬೆಳಗ್ಗೆ ಗುರುಬಸವೇಶ್ವರ ಮೂರ್ತಿಗೆ ಹೂಗಳಿಂದ ಅಲಂಕರಿಸಿ ಪೂಜಿಸಲಾಗಿತ್ತು.

ನಂತರ ಅಲಂಕೃತ ಅಡ್ಡಪಲ್ಲಕ್ಕಿಯಲ್ಲಿ ಗುರುಬಸವೇಶ್ವರರ ಮೂರ್ತಿ ಇಟ್ಟು ಮೆರವಣಿಗೆ ಮಾಡಲಾಯಿತು. ಮಹಿಳೆಯರ ಕಳಸ, ಕುಂಭ, ಡೊಳ್ಳು ಹಾಗೂ ಜಂತ್ಲಿ, ಲಕಮಾಪುರ, ನೆಲ್ಲೂರು, ಕವಲೂರು ಗ್ರಾಮದ ಭಜನಾ ಮೇಳಗಳು ಗಮನಸೆಳೆದವು. ನಂತರ ಅನ್ನ ಸಂತರ್ಪಣೆ ಕಾರ್ಯಕ್ರಮ ನಡೆಯಿತು. ಪ್ರಮುಖರಾದ ಮುತ್ತಣ್ಣ ಬಿಸರಳ್ಳಿ, ನಾಗರಾಜ ಕಗ್ಗಲ್, ಹನುಮಂತ ಹೊಸಮನಿ, ಅಜ್ಜಪ್ಪ ಕುರವತ್ತಿಮಠ, ವೀರಣ್ಣ ಕುವತ್ತಿ, ನಾಗಪ್ಪ ತುರ್ಕಾಣಿ, ನಾಗಪ್ಪ, ನಿಂಗಪ್ಪ ಇಟಗಿ, ಹನುಮಪ್ಪ ಕಮತರ, ಶಿವು ಹೊಸಮನಿ, ಹನುಮಪ್ಪ ಪೋತರಡ್ಡಿ, ಅಂದಪ್ಪ ಸಿಂದೋಗಿ, ಶಿವಯ್ಯ, ವೀರಪ್ಪ, ತಿಪ್ಪಣ್ಣ,ಬೂದಪ್ಪ, ಶರಣಪ್ಪ, ಶಶಿ ಇತರರಿದ್ದರು.