ಜಿಲ್ಲೆ

ವಿಜಯ ಕಾಲೇಜಿನಲ್ಲಿ ಗುರುವಂದನೆ ಕಾರ್ಯಕ್ರಮ; ಹಳೆಯ ವಿದ್ಯಾರ್ಥಿಗಳ ಸಮ್ಮೀಲನ

ಬೆಂಗಳೂರು: ಜಯನಗರದ ವಿಜಯ ಕಾಲೇಜಿನಲ್ಲಿ ಗುರುವಂದನೆ ಮತ್ತು ಹಳೆಯ ವಿದ್ಯಾರ್ಥಿಗಳ ಸಮ್ಮೀಲನ ಕಾರ್ಯಕ್ರಮವು ಇತ್ತೀಚೆಗೆ ವಿಜೃಂಭಣೆಯಿಂದ ನಡೆಯಿತು.

ಕಾಲೇಜಿನ 80ನೇ ವರ್ಷದ ವಾರ್ಷಿಕೋತ್ಸವ ಸಮಾರಂಭಕ್ಕೆ ಮೈಸೂರು ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು.

ಈ ವೇಳೆ ಮಾತನಾಡಿದ ಅವರು, ಹಳೆಯ ವಿದ್ಯಾರ್ಥಿಗಳು, ನಿವೃತ್ತ ಪ್ರಾಧ್ಯಾಪಕರು ಮತ್ತು ಕಾಲೇಜಿನ ಅಭಿಮಾನಿಗಳನ್ನು ಒಂದುಗೂಡಿಸಿದ ಈ ಕಾರ್ಯಕ್ರಮವು ನೆನಪಿನ ಕ್ಷಣಗಳ ಉತ್ಸವವಾಗಿದೆ ಎಂದರು. ಎಲ್ಲ ಗುರು ಹಿರಿಯರ ಆಶೀರ್ವಾದಿಂದ ಮೈಸೂರು ಅರಸು ಮನೆತನ ಉತ್ತಮ ಹೆಸರು ಗಳಿಸಿದೆ. ಮೈಸೂರು ಮಹಾರಾಜರು ಅನೇಕ ದೇವಾಲಯಗಳು, ಮಠಗಳು, ಹಲವು ಸಂಸ್ಥೆಗಳ ಅಭಿವೃದ್ಧಿಗೆ ಕೊಡುಗೆ ನೀಡಿದ್ದನ್ನು ಸ್ಮರಿಸಿದರು.

ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದ ಗಣ್ಯರು, ಸಾಧಕರು, ಹಳೇ ಉಪನ್ಯಾಸಕರನ್ನು ಸನ್ಮಾನಿಸಲಾಯಿತು. ಸಮಾರಂಭದಲ್ಲಿ ವಿಜಯಾ ವಾಣಿಜ್ಯ ಹಳೆಯ ವಿದ್ಯಾರ್ಥಿ ಸಂಘದ ಮಾಜಿ ಅಧ್ಯಕ್ಷ ರಾಜಶೇಖರ್.ಎಸ್, ಶಿಕ್ಷಣತಜ್ಞ ಪದ್ಮಶ್ರೀ ಡಾ.ಎಂ.ಕೆ.ಶ್ರೀಧರ್, ಸರ್ವಮಂಗಳ ಸ್ಮಾರಕ ಟ್ರಸ್ಟ್ನ ಕೆ.ಆರ್. ಸೋಮಶೇಖರ್, ನಿರ್ದೇಶಕ ಸುಚೇಂದ್ರ ಪ್ರಸಾದ್,ಟಿ.ಎ.ಬಾಲಕೃಷ್ಣ ಅಡಿಗ ಮತ್ತಿತರರು ಪಾಲ್ಗೊಂಡಿದ್ದರು.