ಜಿಲ್ಲೆ

ಸಸ್ಯ ಸಂರಕ್ಷಣೆ ಎಲ್ಲರ ಜವಾಬ್ದಾರಿ -ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ

Mangaluru - Hariprasad Rai



ಮಂಗಳೂರು : ಪ್ರಕೃತಿಯ ನಾಶದಿಂದ ಈ ಜಗತ್ತಿನ ಅವನತಿಯಾಗಲಿದೆ. ಭೂಮಿಯ ಮೇಲೆ ಬದುಕಬೇಕೆಂದಿದ್ದರೆ ಪ್ರಾಣವಾಯು ಮರುಪೂರಣಕ್ಕೆ ಸಸ್ಯ ಸಂರಕ್ಷಣೆ ಮಾಡಲೇ ಬೇಕು ಎಂದು ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.
ಮಂಗಳೂರಿನ ಕಲ್ಕೂರ ಪ್ರತಿಷ್ಠಾನದಿಂದ ಕದ್ರಿ ಮಂಜು ಪ್ರಾಸಾದದಲ್ಲಿ ಮಂಗಳವಾರ ನಡೆದ ಶ್ರೀ ವಿಶ್ವೇಶತೀರ್ಥರಿಗೆ ಗುರುವಂದನಾ ಮತ್ತು ಸಸಿ ತುಲಾಭಾರ ನೆರವೇರಿಸಿ ಮಾತನಾಡಿದ ಅವರು ‘ ಪ್ರಕೃತಿಯ ಆರಾಧನೆಯ ಜತೆ ನಾವೆಲ್ಲ ಅಹಿಂಸಾ ತತ್ವವನ್ನು ಪಾಲಿಸೋಣ ಎಂದರು.
ವಿವಿಧ ಬಗೆಯ ಸಸಿಗಳ ತುಲಾಭಾರ ನೆರವೇರಿಸಿ, ಬಳಿಕ ಪ್ರಸಾದ ರೂಪದಲ್ಲಿ ಸಸಿಗಳನ್ನು ವಿತರಿಸಲಾಯಿತು. ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಪ್ರಾಸ್ತಾವಿಕವಾಗಿ ಮಾತನಾಡಿದರು.
ಮಂಗಳೂರು ಪಾಲಿಕೆ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು, ಪಾಲಿಕೆ ಸದಸ್ಯೆ ಶಕಿಲಾ ಕಾವ, ಶರವು ಶ್ರೀ ಮಹಾಗಣಪತಿ ದೇವಸ್ಥಾನದ ಆಡಳಿತ ಮೊಕ್ತೆಸರ ಶರವು ರಾಘವೇಂದ್ರ ಶಾಸ್ತ್ರಿ, ವಿಹಿಂಪ ಮುಖಂಡ ಪ್ರೊ. ಎಂ.ಬಿ. ಪುರಾಣಿಕ್, ಧರ್ಮದರ್ಶಿ ಹರಿಕೃಷ್ಣ ಪುನರೂರು, ಭುವನಾಭಿರಾಮ ಉಡುಪ, ಸುಧಾಕರ ರಾವ್ ಪೇಜಾವರ, ಭಾಸ್ಕರ್ ರೈ ಕುಕ್ಕುವಳ್ಳಿ, ಶ್ರೀಧರ ಹೊಳ್ಳ, ಕೃಷ್ಣ ಭಟ್, ರಾಮಚಂದ್ರ ಭಟ್ ಎಲ್ಲೂರು, ಜನಾರ್ದನ ಹಂದೆ ಉಪಸ್ಥಿತರಿದ್ದರು.