ಕಂಪ್ಲಿ: ಇಲ್ಲಿನ ಸತ್ಯನಾರಾಯಣಪೇಟೆಯ ಶ್ರೀಮನ್ ಮಧ್ವಾಚಾರ್ಯರ ಮೂಲಮಹಾಸಂಸ್ಥಾನ ನಂಜನಗೂಡು ಶ್ರೀ ರಾಘವೇಂದ್ರಸ್ವಾಮಿಗಳ ಶಾಖಾಮಠದಲ್ಲಿ ಗುರುಸಾರ್ವಭೌಮರ 353ನೇ ಆರಾಧನಾ ಮಹೋತ್ಸವ ನಿಮಿತ್ತ ಗುರುವಾರ ಉತ್ತರಾರಾಧನೆ ಕಾರ್ಯಕ್ರಮಗಳು ಶ್ರದ್ಧೆಭಕ್ತಿಯಿಂದ ಜರುಗಿದವು.
ಬೆಳಗ್ಗೆ ಸುಪ್ರಭಾತ, ನಿರ್ಮಾಲ್ಯ ವಿಸರ್ಜನೆ, ಅಷ್ಟೋತ್ತರಸಹಿತ ಫಲ ಪಂಚಾಮೃತಾಭಿಷೇಕ, ಉತ್ತರಾಧನಾ ಪ್ರಯುಕ್ತ ರಥೋತ್ಸವ, ಸ್ವಸ್ತಿವಾಚನ, ಕನಕಾಭಿಷೇಕ, ನೈವೇದ್ಯ, ಹಸ್ತೋದಕ, ಮಹಾಮಂಗಳಾರತಿ ಸೇರಿ ವಿವಿಧ ಧಾರ್ಮಿಕ, ಆಧ್ಯಾತ್ಮಿಕ ಕಾರ್ಯಕ್ರಗಳು ಜರುಗಿದವು.
ವಿಚಾರಣಾಕರ್ತ ಟಿ.ಕೊಟ್ರೇಶ, ವ್ಯವಸ್ಥಾಪಕ ಪುರುಷೋತ್ತಮಾಚಾರ್, ಅರ್ಚಕ ಕಿಶೋರಾಚಾರ್ ಪೌರೋಹಿತ್ಯವಹಿಸಿದ್ದರು. ರಾಯರ ಬೃಂದಾವನವನ್ನು ಪುಷ್ಪಾದಿಗಳಿಂದ ಅಲಂಕರಿಸಲಾಗಿತ್ತು.