ಹುಬ್ಬಳ್ಳಿ: ಇಲ್ಲಿಯ ಭೈರಿದೇವರಕೊಪ್ಪದ "ತ್ರಿ ಭುವನ' ನಿವಾಸದಲ್ಲಿ ಇತ್ತೀಚೆಗೆ ಗುರು ಪೂರ್ಣಿಮೆ ಆಚರಿಸಲಾಯಿತು.
ಅತಿಥಿಯಾಗಿದ್ದ ನಿವೃತ್ತ ಗ್ರಂಥಪಾಲಕ ಡಾ. ಬಿ.ಎಸ್. ಮಾಳವಾಡ ಮಾತನಾಡಿ, ಗುರು ಪೂರ್ಣಿಮೆ ಎನ್ನುವುದು ಗುರುಗಳನ್ನು ಸ್ಮರಿಸುವ ಮತ್ತು ಪೂಜಿಸುವ ದಿನವಾಗಿದೆ. ಜೀವನದಲ್ಲಿ ಗುರುಗಳ ಮಹತ್ವ ಬಹಳ ಇದೆ ಎಂದು ಹೇಳಿದರು.
ಶಿಷ್ಯರು, ವಿದ್ಯಾರ್ಥಿಗಳ ಭವಿಷ್ಯ ನಿರ್ಮಿಸುವ ಶಿಕ್ಷಕರಿಗೆ ಮತ್ತು ಮಾರ್ಗದರ್ಶಕರಿಗೆ ಗುರುಪೂರ್ಣಿಮೆ ಸಮರ್ಪಣೆಯಾಗಿದೆ. ಇದನ್ನು ಎಲ್ಲ ಧರ್ಮಿಯರು ಆಚರಿಸುತ್ತಾರೆ ಎಂದರು.
ಗಣ್ಯರಾದ ಚಿದಂಬರರಾವ ಕುಲಕರ್ಣಿ, ವಿನಯ ದೀಕ್ಷಿತ, ತಿರುಮಲರಾವ ನಾಡಕರ್ಣಿ, ನರಸಿಂಹ ವೈದ್ಯ, ಮೋಹನ ಕುಲಕರ್ಣಿ, ಪ್ರತಿಭಾ ಕುಲಕರ್ಣಿ, ಶೈಣಿಕ ತ ಪ್ರೊ. ಜಿ.ವಿ. ವಳಸಂಗ, ನಿವೃತ್ತ ಪ್ರಾಚಾರ್ಯ ಪ್ರೊ. ಎಂ.ವಿ. ಗಡಾದ, ಸಸ್ಯಶಾಸ್ತ್ರ ಪರಿಣಿತ ಡಾ. ಬಿ.ಡಿ. ಹುದ್ದಾರ, ಪ್ರಾಚಾರ್ಯ ಡಾ. ಎಲ್.ಡಿ. ಹೊರಕೇರಿ, ಉಪನ್ಯಾಸಕ ಅನಿಲ ಕಬ್ಬೂರ, ಡಾ. ಬಿ.ಎಸ್. ಮಾಳವಾಡ ಅವರನ್ನು ಸನ್ಮಾನಿಸಲಾಯಿತು.
ರಮೇಶ ಸಿಂದಗಿ, ಗುರುರಾಜ ಎಚ್., ಆನಂದ ಜೋಶಿ, ಮಾರುತಿ ಕಬ್ಬೇರ, ಸುಧಾ ರಮೇಶ, ಪೂಜಾ ಕುಲಕರ್ಣಿ, ಪೂರ್ಣಾನಂದ ಕುಲಕರ್ಣಿ, ಸುರೇಂದ್ರ ಮುಂತಾದವರು ಉಪಸ್ಥಿತರಿದ್ದರು.
ಎಚ್. ಮುರಲೀಧರ ಸ್ವಾಗತಿಸಿದರು, ವಾಣಿ ಮುರಲೀಧರ ಮತ್ತು ಸಂಗಡಿಗರು ಭಕ್ತಿ ಗೀತೆ ಹಾಡಿದರು, ವೈಷ್ಣವಿ ಎಚ್. ವಂದಿಸಿದರು.