ವಿಜಯವಾಣಿ ಸುದ್ದಿಜಾಲ ಧಾರವಾಡ
ನಗರದ ಸತ್ತೂರಿನ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದಲ್ಲಿ ಗುರುವಾರ ಗುರುಪೂರ್ಣಿಮೆ ಆಚರಿಸಲಾಯಿತು.
ಅತಿಥಿಯಾಗಿ ಪಾಲ್ಗೊಂಡಿದ್ದ ಪ್ರಜ್ಞಾ ಪ್ರವಾಹದ ಅಖಿಲ ಭಾರತೀಯ ಸಹ ಸಂಯೋಜಕ ರಘುನಂದನ್ ಮಾತನಾಡಿ, ವಿದ್ಯಾರ್ಥಿಗಳು ದೇಶ ರಕ್ಷಣೆ, ಸಮಾಜಸೇವೆಯ ಮನೋಭಾವ ಬೆಳೆಸಿಕೊಳ್ಳಬೇಕು. ನೆಲ, ಜಲ ಸಂರಕ್ಷಣೆಗೆ ಒತ್ತು ನೀಡಬೇಕು ಎಂದರು.
ಪ್ರಧಾನಾಚಾರ್ಯ ರಾಮಕೃಷ್ಣ ಆರ್., ಸಂಸ್ಥೆಯ ಕರೆಸ್ಪಾಂಡೆ0ಟ್ ಗುರುರಾಜ ಅಗಡಿ, ಇತರರಿದ್ದರು. ವಿದ್ಯಾರ್ಥಿಗಳು ಗುರುವಿನ ಮಹಿಮೆ ಸಾರುವ ಭಾಷಣ, ಭಕ್ತಿಗೀತೆ, ಗುರುವಂದನಾ ನೃತ್ಯ ಪ್ರಸ್ತುತಪಡಿಸಿದರು.