ಜಿಲ್ಲೆ

ಗುರು ಪೂರ್ಣಿಮೆ ಆಚರಣೆ

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ಸಂತೋಷನಗರದ ಜೆ.ಕೆ.ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸೋಮವಾರ ಗುರು ಪೂರ್ಣಿಮೆ ಆಚರಿಸಲಾಯಿತು.

ವಿದ್ಯಾರ್ಥಿಗಳು ಶಾಲೆಗೆ ಆಗಮಿಸಿದ್ದ ತಮ್ಮ ಅಜ್ಜಂದಿರ ಪಾದ ಪೂಜೆ ನೆರವೇರಿಸಿ ಆಶೀರ್ವಾದ ಪಡೆದರು.

ಜೆ.ಕೆ. ಶಿಕ್ಷಣ ಸಂಸ್ಥೆಯ ಚೇರ್ಮನ್ ಜಗದೀಶ ಕಲ್ಯಾಣಶೆಟ್ಟರ್, ಪ್ರಾಚಾರ್ಯ ಝೆಡ್.ಎಸ್. ಪೌಲ್, ಮುಖ್ಯಾಧ್ಯಾಪಕಿ ಸ್ಮಿತಾ ವೇರ್ಣೆಕರ್ ಮಾತನಾಡಿ ಮಕ್ಕಳು, ತಂದೆ ತಾಯಿಗಳನ್ನು, ಹಿರಿಯರನ್ನು ಹಾಗೂ ಶಿಕ್ಷಕರನ್ನು ಗೌರವದಿಂದ ಕಾಣಬೇಕು ಎಂದು ಹೇಳಿದರು.

ವಿದ್ಯಾರ್ಥಿಗಳು ಮಹರ್ಷಿ ವೇದವ್ಯಾಸ, ಶ್ರೀ ಸಿದ್ಧಾರೂಢ ಸ್ವಾಮಿ, ಶ್ರೀ ರಾಘವೇಂದ್ರ ಸ್ವಾಮಿ, ಸಾಯಿಬಾಬಾ, ಸಂತ ಶಿಶುನಾಳ ಶರೀಫ್​ರ ವೇಷಭೂಷಣ ತೊಟ್ಟು ಗಮನ ಸೆಳೆದರು. ಇವರ ಜೀವನ ಕಥೆಯನ್ನು ಶಿಕ್ಷಕಿ ಗಂಗು ಹೈದಲೆ ವಿವರಿಸಿದರು.