ಚಿತ್ರದುರ್ಗ: ಅಕ್ಷರ, ಅರಿವು, ಆಧ್ಯಾತ್ಮ ಗುರುವೇ ಬದುಕಿನಲ್ಲಿ ಪರಿಪೂರ್ಣ ವ್ಯಕ್ತಿಯಾಗಿ ನಿರ್ಮಿಸುವ ತ್ರಿಮೂರ್ತಿಗಳು ಎಂದು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಹೇಳಿದರು.
ಹೊರವಲಯದ ಎಸ್‌ಜೆಎಸ್ ಸಮೂಹ ಸಂಸ್ಥೆಯ ವಿದ್ಯಾರ್ಥಿಗಳಿಂದ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಮಾನವ ಏನೇ ಸಾಧಿಸಿದರೂ ಶಿಕ್ಷಕರ ಪ್ರೇರಣೆಯಿಂದ ಮಾತ್ರ ಸಾಧ್ಯ. ಮಕ್ಕಳ ಭವಿಷ್ಯ ರೂಪಿಸುವಲ್ಲಿ ಪೂಜ್ಯ ಸ್ಥಾನದಲ್ಲಿರುವ ಅವರ ಕೊಡುಗೆ ಅಪಾರವಾಗಿದ್ದು, ಜ್ಞಾನಸಾಗರ ಆಗಿದ್ದಾರೆ. ದೇಶದ ಪ್ರಗತಿಯಲ್ಲೂ ಮಹತ್ತರ ಪಾತ್ರ ವಹಿಸಲಿದ್ದಾರೆ ಎಂದರು.