ಜಿಲ್ಲೆ

ಸಮಾಜ ತಿದ್ದುವ ಶಕ್ತಿ ಗುರುವಿಗಿದೆ

ಮದ್ದೂರು: ಹಿಂದೆ ಗುರು ಮುಂದೆ ಗುರಿ ಇದ್ದರೆ ಮಾತ್ರ ಜೀವನ ಒಳಿತಾಗುವುದು ಎಂದು ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಜಿಲ್ಲಾಧ್ಯಕ್ಷ ವಿ.ಸಿ.ಉಮಾಶಂಕರ್ ತಿಳಿಸಿದರು.

ತಾಲೂಕಿನ ರುದ್ರಾಕ್ಷಿಪುರದಲ್ಲಿ ಶಿಕ್ಷಕರ ದಿನಾಚರಣೆ ಅಂಗವಾಗಿ ವೇದಿಕೆ ವತಿಯಿಂದ ನಡೆದ ನಿವೃತ್ತ ಶಿಕ್ಷಕರಿಗೆ ಸನ್ಮಾನ ಸಮಾರಂಭದಲ್ಲಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ನಮಗಾಗಿ ನಾವು ಯೋಚಿಸಲು ನಮಗೆ ಸಹಕಾರ ಮಾಡಿದವರೆ ಗುರು. ಶಿಕ್ಷಣ ಪ್ರತಿಯೊಂದು ವ್ಯಕ್ತಿಯಲ್ಲಿ ಪರಿಪೂರ್ಣತೆ ತರಬೇಕು ಜೀವನವನ್ನು ಮುನ್ನಡೆಸುವ ಸಾಮರ್ಥ್ಯವನ್ನು ನೀಡಬೇಕು ಆದ್ದರಿಂದ ವಿದ್ಯಾರ್ಥಿಗಳಿಗೆ ತಿದ್ದಿ ಬುದ್ಧಿ ಹೇಳಿ ಸಮಾಜವನ್ನು ತಿದ್ದುವ ಶಕ್ತಿ ಗುರುವಿಗೆ ಮಾತ್ರವಿದೆ ಎಂದು ತಿಳಿಸಿದರು.

ವೇದಿಕೆ ರಾಜ್ಯಾಧ್ಯಕ್ಷ ರಮೇಶ್‌ಗೌಡ ಮಾತನಾಡಿ, ಆರಕ್ಷಕರಿಲ್ಲದೆ ರಕ್ಷಣೆ ಇಲ್ಲ, ವಕೀಲರಿಲ್ಲದೆ ನ್ಯಾಯವಿಲ್ಲ, ವೈದ್ಯರಿಲ್ಲದೆ ಆರೋಗ್ಯವಿಲ್ಲ, ಅಭಿಯಂತರರಿಲ್ಲದೆ ಅಭಿವೃದ್ಧಿ ಇಲ್ಲ ಗುರುಗಳಿಲ್ಲದಿದ್ದರೆ ಮೇಲಿನವರ್ಯಾರು ಇಲ್ಲ ಗುರು ಎಂದರೆ ವ್ಯಕ್ತಿಯಲ್ಲ ಅದೊಂದು ಶಕ್ತಿ ಅಜ್ಞಾನದ ಕತ್ತಲೆ ಕಳೆದು ಸುಜ್ಞಾನದ ಕಡೆಗೆ ಕರೆದುಕೊಂಡು ಹೋಗುವ ಅದ್ಭುತ ಶಬ್ಧವೇ ಗುರು ಎಂದರು.

ನಿವೃತ್ತ ಪ್ರಾಂಶುಪಾಲ ನಿಂಗೇಗೌಡ, ನಿವೃತ್ತ ಶಿಕ್ಷಕರಾದ ನಾರಾಯಣ, ಲಕ್ಷ್ಮಣ, ಆಲೂರು ಚನ್ನಪ್ಪ, ಅಂಕಯ್ಯ, ಚಿಕ್ಕಮರಿಗೌಡ, ಉಮಾಶಂಕರ, ಚಂದ್ರಶೇಖರ್, ಬಲರಾಮ, ಸಿ.ಟಿ.ದಾಸಯ್ಯ ಅವರನ್ನು ಸನ್ಮಾನಿಸಲಾಯಿತು.

ಸೆನೆಟ್ ಮಾಜಿ ಸದಸ್ಯ ವಿ.ಕೆ.ಜಗದೀಶ್, ತಾಪಂ ಮಾಜಿ ಸದಸ್ಯ ಚಿಕ್ಕ ಮರಿಯಪ್ಪ, ತೈಲೂರು ರಾಜೇಂದ್ರ, ವೇದಿಕೆ ತಾಲೂಕು ಅಧ್ಯಕ್ಷ ತಿಪ್ಪೂರು ರಾಜೇಶ್, ಕಾರ್ಯದರ್ಶಿ ಸೋಂಪುರ ಉಮೇಶ್, ಜಿಲ್ಲಾ ರೈತ ಮುಖಂಡ ಸೊ.ಶಿ.ಪ್ರಕಾಶ್, ಮುಖಂಡರಾದ ಮಹಾಲಿಂಗು, ವಿ.ಟಿ.ಕೆಂಚಪ್ಪ, ಪಟೇಲ ಹರೀಶ, ರಾಮನಗರ ವೇದಿಕೆ ಜಿಲ್ಲಾಧ್ಯಕ್ಷ ಯೋಗೇಶ್, ಸತೀಶ್, ವಿಶ್ವಾಸ್, ರಮೇಶ್, ಬ್ಯಾಂಕ್ ಚಿಕ್ಕಣ್ಣ, ರಾಮಲಿಂಗು ಕೆ.ಜಿ.ಉಮೇಶ್, ಸಕ್ಕರೆ ನಾಗರಾಜು ಇದ್ದರು.