ಜಿಲ್ಲೆ

ಶ್ರೀಗುರು ಪ್ರತಿಪದಾ ಉತ್ಸವ 7ರಿಂದ

Dharwada - Basavaraj Idli

ಹುಬ್ಬಳ್ಳಿ: ಇಲ್ಲಿಯ ಗೋಕುಲ ರಸ್ತೆ ರೇಣುಕಾನಗರದ ಶೃಂಗೇರಿ ಶಾರದಾ ಪೀಠಂ ಶಾಖೆ ವತಿಯಿಂದ ಶ್ರೀಗುರು ಪ್ರತಿಪದಾ ಉತ್ಸವವು ಫೆಬ್ರವರಿ 7ರಿಂದ 14ರ ವರೆಗೆ ಏರ್ಪಡಿಸಲಾಗಿದೆ.

ಶ್ರೀದತ್ತ ಪಾದುಕೆಗೆ ಪೂಜೆ, ಪಂಚಾಮೃತ ಅಭಿಷೇಕ ನಡೆಯಲಿದೆ. ವಿನೋದ ಕುಲಕರ್ಣಿ ಅವರಿಂದ ಶ್ರೀ ಗುರುಚರಿತ್ರೆ ಪಾರಾಯಣ ನಡೆಯಲಿದೆ.
ಫೆ. 6ರಂದು ಸಂಜೆ 6ಕ್ಕೆ ಪವನ ಕುಲಕರ್ಣಿ ಅವರ ನಿವಾಸದಿಂದ ದತ್ತ ಪಾದುಕೆ ಹಾಗೂ ಗುರುಚರಿತ್ರೆ ಗ್ರಂಥದ ಶೋಭಾಯಾತ್ರೆ ಆರಂಭವಾಗಿ ಶ್ರೀಮಠ ತಲುಪುವುದು.

ಫೆ. 7ರಂದು ಸಂಜೆ ಸೌಂದರ್ಯಲಹರಿ ಪಾರಾಯಣ, 8ರಂದು ಭಗವದ್ಗೀತೆ ಪಾರಾಯಣ, 9ರಂದು ಶಂಕರಾಚಾರ್ಯ ಸ್ತೋತ್ರ ಪಾರಾಯಣ, 10ರಂದು ಸುಹಾಸಿನಿಯರಿಂದ ಕುಂಕುಮಾರ್ಚನೆ, 11ರಂದು ಲಲಿತಾ ಸಹಸ್ರನಾಮ ಪಾರಾಯಣ, 12ರಂದು ವಿಷ್ಣು ಸಹಸ್ರನಾಮ, 13ರಂದು ಕಲ್ಯಾಣ ವೃಷ್ಟಿಸ್ತವ, ದತ್ತಭಜನೆ ನಡೆಯಲಿದೆ.