ಜಿಲ್ಲೆ

ಕನಸಾಗೇ ಉಳಿದ ಗುರುಭವನ

ರೇಷ್ಮೆ ನಗರ ಡೆಸ್ಕ್

ಚನ್ನಪಟ್ಟಣದಲ್ಲಿ ಶಿಕರ ಸಮುದಾಯ ಭವನ ನನೆಗುದಿಗೆ

ಚನ್ನಪಟ್ಟಣ: ತಾಲೂಕಿನಲ್ಲಿ ಸುಸಜ್ಜಿತ ಗುರುಭವನ ನಿರ್ಮಾಣವಾಗಬೇಕೆಂಬ ಸಹಸ್ರಾರು ಶಿಕರು ಕಂಡ ಕನಸು ಬರೋಬ್ಬರಿ ಎರಡು ದಶಕ ಪೂರೈಸಿದ್ದು, ನನಸಾಗದೆ ಕನಸಾಗಿಯೇ ಉಳಿದಿದೆ.

ಹೌದು...! ತಾಲೂಕಿನ ಶಿಕರ ಅನುಕೂಲಕ್ಕಾಗಿ ಆರಂಭಗೊಂಡಿದ್ದ ಗುರುಭವನ (ಶಿಕರ ಸಮುದಾಯ ಭವನ) ನಿರ್ಮಾಣ ಕಾರ್ಯ ನನೆಗುದಿಗೆ ಬಿದ್ದು ಎರಡು ದಶಕವಾಗಿದೆ. ಇದರಿಂದ ತಾಲೂಕಿನ ಶಿಕರ ಚಟುವಟಿಕೆಗಳಿಗೆ ಸೂರಿಲ್ಲದಂತಾಗಿದ್ದು, ಭವನ ನಿರ್ಮಾಣಕ್ಕೆ ರಾಜಕಾರಣಿಗಳ ಇಚ್ಛಾಶಕ್ತಿ ಹಾಗೂ ಶಿಕ ಸಂಟನೆಗಳ ಸಂಟನಾ ಕೊರತೆ ಕಾರಣ ಎಂಬುದರಲ್ಲಿ ಎರಡು ಮಾತಿಲ್ಲ.

ನಗರದ ಜಿಕೆಎಂಪಿಎಸ್​ ಶಾಲಾ ಆವರಣದಲ್ಲಿ (ಬಿಆರ್​ಸಿ ಕೇಂದ್ರ) 2005ರಲ್ಲಿ ಸುಸಜ್ಜಿತ ಶಿಕರ ಸಮುದಾಯ ಭವನಕ್ಕೆ ಅಂದೂ ಶಾಸಕರಾಗಿದ್ದ ಸಿ.ಪಿ.ಯೋಗೇಶ್ವರ್​ ಅಧ್ಯತೆಯಲ್ಲಿ ಶಂಕುಸ್ಥಾಪನೆ ನೆರವೇರಿಸಲಾಗಿತ್ತು. ಅದಕ್ಕೂ ಮೊದಲೇ ತಾಲೂಕಿನಲ್ಲಿ ಗುರುಭವನ ನಿರ್ಮಾಣವಾಗಿದ್ದ ಕಾರಣ ಶಿಕರ ಸಮುದಾಯ ಭವನದ ಹೆಸರಿನಲ್ಲಿ ಬೃಹತ್​ ಕಟ್ಟಡ ನಿರ್ಮಾಣ ಮಾಡಲು ರೂಪುರೇಷೆ ಸಿದ್ಧಪಡಿಸಲಾಗಿತ್ತು. ಆದರೆ, 20 ವರ್ಷ ಕಳೆದರೂ ಭವನ ನಿರ್ಮಾಣದ ಕಾರ್ಯ ಪ್ರಗತಿ ಕಂಡಿಲ್ಲ.

ಶಿಕ್ಷಕರ ದಿನವನ್ನೂ ಖಾಸಗಿಮಂಟಪದಲ್ಲಿ ಆಚರಿಸುವ ಸ್ಥಿತಿಉದ್ದೇಶಿತ ಶಿಕರ ಸಮುದಾಯ ಭವನದ ಪಕ್ಕದಲ್ಲಿ ಆ ಕಾಲದಲ್ಲಿ ತಾಲೂಕಿನ ಶಿಕ ಸಮುದಾಯ ಸ್ವತ@ ಹಣ ಹೊಂದಿಸಿಕೊಂಡು ಉತ್ತಮ ಭವನ ನಿರ್ಮಿಸಿಕೊಂಡಿದ್ದರು. ಭವನ ಶಿಕರ ಚಟುವಟಿಕೆಗೆ ಸಿಮೀತವಾಗದೇ, ಭವನದಲ್ಲಿ ಮದುವೆ ಹಾಗೂ ಶುಭ ಸಮಾರಂಭಗಳೂ ನಡೆಯುತ್ತಿದ್ದವು, ಜಿಲ್ಲೆಯ ಅತ್ಯುತ್ತಮ ಗುರುಭವನ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಆದರೆ, ಕಾಲಕ್ರಮೇಣ ಸೂಕ್ತ ನಿರ್ವಹಣೆ ಕೊರತೆ ಹಾಗೂ ಕಿಡಿಗೇಡಿಗಳಿಂದ ಗುರುಭವನ ಶಿಥಿಲಾವಸ್ಥೆ ತಲುಪಿದ್ದರಿಂದ ಇದಕ್ಕೆ ಪರ್ಯಾಯವಾಗಿ ಆರಂಭಗೊಂಡಿದ್ದೇ ಶಿಕರ ಸಮುದಾಯ ಭವನ. ಆದರೆ, ಎರಡು ದಶಕಗಳಿಂದ ಯಾವ ಭವನವೂ ಇಲ್ಲದೇ ಶಿಕ ಸಮುದಾಯ ತಮ್ಮ ಚಟುವಟಿಕೆ ನಡೆಸಲು ನೆಲೆ ಇಲ್ಲದ ಸ್ಥಿತಿ ಎದುರಾಗಿದ್ದು, ವರ್ಷಕೊಮ್ಮೆ ಶಿಕರ ದಿನವನ್ನೂ ಖಾಸಗಿ ಕಲ್ಯಾಣ ಮಂಟಪದಲ್ಲಿ ಆಚರಿಸುವ ಅನಿವಾರ್ಯತೆ ಉಂಟಾಗಿದೆ.ನನೆಗುದಿಗೆ ಬೀಳಲು ಕಾರಣ?ನೂತನ ಭವನ ಕೇವಲ ಅಡಿಪಾಯಕ್ಕೆ ಸೀಮಿತವಾಗಿದ್ದು, ಈ ಅಡಿಪಾಯವೂ ಪ್ರಸ್ತುತ ಗಿಡಗಂಟಿ, ಪೊದೆಗಳಿಂದ ಆವೃತಗೊಂಡಿದೆ. ಭವನ ನನೆಗುದಿಗೆ ಬೀಳಲು ಕಾರಣವೇನು? ಅಡಿಪಾಯಕ್ಕೆ ಬಿಡುಗಡೆಯಾದ ಹಾಗೂ ರ್ಖಚಾದ ಮೊತ್ತವೇನು? ಹೀಗೆ ಈ ಭವನಕ್ಕೆ ಸಂಬಂಧಿಸಿದ ಯಾವುದೇ ಮಾಹಿತಿ ಶಿಕರಿಗೆ ಇಲ್ಲವಾಗಿದೆ. ಈ ಹಿಂದಿನ ಗುರುಭವನ ಹಾಗೂ ಉದ್ದೇಶಿತ ಭವನದ ಅಡಿಪಾಯ ಎರಡನ್ನೂ ನೆಲಸಮಗೊಳಿಸಿ, ಶಿಕರಿಗೆ ಒಂದು ಸೂರು ಕಲ್ಪಿಸಲು ಸಂಬಂಧಪಟ್ಟವರು ಮುಂದಾಗಬೇಕಿದೆ.ಭಾಷಣಕ್ಕೆ ಸೀಮಿತವಾದ ಭರವಸೆ!ಭವನ ನಿರ್ಮಾಣ ವಿಚಾರದಲ್ಲಿ ೇತ್ರವನ್ನು ಪ್ರತಿನಿಧಿಸಿದ ಎಲ್ಲ ರಾಜಕೀಯ ನಾಯಕರು ಕೇವಲ ಭಾಷಣಕ್ಕೆ ಸೀಮಿತವಾಗಿದ್ದು, ಭವನಕ್ಕೆ ಶಂಕುಸ್ಥಾಪನೆ ಮಾಡಿದ ಅಂದಿನ ಶಾಸಕ ಹಾಗೂ ಪ್ರಸುತ್ತ ಶಾಸಕರೂ ಆಗಿರುವ ಸಿ.ಪಿ.ಯೋಗೇಶ್ವರ್​ ಹೆಚ್ಚಾಗಿ ತಲೆಕೆಡಿಸಿಕೊಂಡಿಲ್ಲ ಎಂಬುದಕ್ಕೆ ಪಾಳುಬಿದ್ದಿರುವ ಭವನದ ಅಡಿಪಾಯವೇ ಸಾ. ಇನ್ನೂ ಕ್ಷೇತ್ರದ ಬಗ್ಗೆ ಪ್ರತಿನಿಧಿಸಿ ಸಿಎಂ ಸಹ ಆಗಿದ್ದ ಎಚ್​.ಡಿ.ಕುಮಾರಸ್ವಾಮಿ ಅವರು ಇನ್ನೊಂದು ವರ್ಷದೊಳಗೆ ಭವನ ನಿರ್ಮಿಸುವ ಭರವಸೆ ನೀಡಿದರೆ ವಿನ@ ಯಾವ ಬದಲಾವಣೆಯೂ ಆಗಿಲ್ಲ. ಇದಾದ ಬಳಿಕ ಉಪಚುನಾವಣೆ ಉದ್ದೇಶದಿಂದ ೇತ್ರದಲ್ಲಿ ನಡೆದ ಜಿಲ್ಲಾಮಟ್ಟದ ಶಿಕರ ದಿನಾಚರಣೆಯಲ್ಲಿ ಭಾಗವಹಿಸಿದ ಡಿಸಿಎಂ ಡಿ.ಕೆ.ಶಿವಕುಮಾರ್​, ಶ್ರೀದಲ್ಲೆ ಗುರುಭವನ ನಿರ್ಮಾಣ ಮಾಡಿಕೊಡುತ್ತೇನೆ. ಇದರೊಂದಿಗೆ, ಶಿಕರಿಗಾಗಿಯೇ ಬಡಾವಣೆಗಳನ್ನು ನಿರ್ಮಿಸಿ ಕೊಡುತ್ತೇವೆ ಎಂದು ಅಬ್ಬರದ ಭಾಷಣ ಮಾಡಿದ್ದರು. ಆದರೆ, ಅವರದೇ ಸರ್ಕಾರವಿದ್ದರೂ ಮಾತಿನಂತೆ ನಡೆದುಕೊಳ್ಳಲಿಲ್ಲ ಎಂದು ಶಿಕ್ಷಕರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಇನ್ನು ಗುರುಭವನ ನಿರ್ಮಾಣದ ವಿಚಾರದಲ್ಲಿ ಶಿಕರ ೇತ್ರವನ್ನು ಹಲವು ಬಾರಿ ಪ್ರತಿನಿಧಿಸಿದ, ತಾಲೂಕಿನವರೇ ಆದ ಎಂಎಲ್ಸಿ ಪುಟ್ಟಣ್ಣ ಸಹ ತವರೂರಿನ ಶಿಕರಿಗೆ ಸೂರು ಕಲ್ಪಿಸಿಕೊಡಲು ಮನಸ್ಸು ಮಾಡದಿರುವ ಆರೋಪ ಕೇಳಿಬಂದಿದೆ.ಸಂಟನಾ ಕೊರತೆ ಕಾರಣವೇ?ಶಿಕರ ಒಗ್ಗಟ್ಟು ಹಾಗೂ ಸಂಟನಾ ಕೊರತೆಯಿಂದ ಉದ್ದೇಶಿತ ಶಿಕರ ಸಮುದಾಯ ಭವನ ನನೆಗುದಿಗೆ ಬೀಳಲು ಕಾರಣವಾಗಿದೆ. ಪ್ರಾಥಮಿಕ, ಪ್ರೌಢ, ಮಾಧ್ಯಮಿಕ, ಜತೆಗೆ ಜಾತಿವಾರಿನ ಹೆಸರಿನಲ್ಲಿಯೂ ಶಿಕರ ಸಂಟನೆಗಳಿದ್ದು, ಭವನದ ವಿಚಾರದಲ್ಲಿ ಸರ್ಕಾರ ಹಾಗೂ ಜನಪ್ರತಿನಿಧಿಗಳ ಬೆನ್ನಿಗೆ ಒಗ್ಗಟ್ಟಾಗಿ ಇವರು ಬೀಳದಿರುವುದೇ ಭವನದ ಇಂದಿನ ಸ್ಥಿತಿಗೆ ಕಾರಣ.