ಶಿರೋಳ: ಗ್ರಾಮದಲ್ಲಿ ತೋಂಟದಾರ್ಯ ಮಠದ ಲಿಂ. ಶ್ರೀ ಗುರುಬಸವ ಮಹಾಸ್ವಾಮಿಗಳ ಪ್ರಥಮ ಪುಣ್ಯಸ್ಮರಣೆ ಅ.31ರಂದು ನಡೆಯಲಿದೆ.
ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸುವರು. ಶಾಂತಲಿಂಗ ಸ್ವಾಮೀಜಿ, ಮಾತೆ ಅಕ್ಕಮಹಾದೇವಿ ಶರಣಮ್ಮನವರು, ಅಭಿನವ ಯಚ್ಚರಸ್ವಾಮೀಜಿ, ವೀರಯ್ಯನವರು ಹಿರೇಮಠ ಸಮ್ಮುಖ ವಹಿಸುವರು. ಬಾಗಲಕೋಟಿ ಸಂಸದ ಪಿ.ಸಿ. ಗದ್ದಿಗೌಡ್ರ, ಶಾಸಕ ಸಿ.ಸಿ.ಪಾಟೀಲ, ಚಿಂಚಣಿಯ ಗಡಿಕನ್ನಡ ಬಳಗದ ಅಧ್ಯಕ್ಷ ಭರತ ಕುಂಬಾರ ಇತರರು ಪಾಲ್ಗೊಳ್ಳುವರು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.